ಚೌಮುಖ ದೇವಾಲಯವೆಂದು ಸಹ ಕರೆಯಲ್ಪಡುವ ಆದೀಶ್ವರ್ ದೇವಾಲಯವು 15 ನೆಯ ಶತಮಾನದಲ್ಲಿ ನಿರ್ಮಾಣಗೊಂಡಿತು. ಈ ದೇವಾಲಯವು ಸ್ವರ್ಗದ ವಿಮಾನವಾದ ನಳಿನಿಗುಲ್ಮ್ ವಿಮಾನವನ್ನು ಹೋಲುವಂತಹ ವಾಸ್ತುಶೈಲಿಗಾಗಿ ಪ್ರಸಿದ್ಧಿಯನ್ನು ಪಡೆದಿದೆ. ಇದು ಜೈನರ ಬೃಹತ್ ದೇವಾಲಯಗಳಲ್ಲಿ ಒಂದಾಗಿದ್ದು, ಇದನ್ನು ನಿರ್ಮಿಸಲು 65 ವರ್ಷಗಳಷ್ಟು ಕಾಲ ತಗುಲಿತು. ದೇಶದಲ್ಲಿರುವ ಜೈನರ ಐದು ಅತ್ಯಂತ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಇದು ಸಹ ಒಂದಾಗಿ ಸ್ಥಾನ ಪಡೆದಿದೆ.
ಈ ದೇವಾಲಯದ ಕಟ್ಟಡವು ಮೂರು ಅಂತಸ್ತನ್ನು ಹೊಂದಿದ್ದು, 80 ಗುಮ್ಮಟಗಳನ್ನು ಮತ್ತು 29 ಹಜಾರಗಳನ್ನು ಹೊಂದಿದೆ. ಪ್ರವಾಸಿಗರು ಇಲ್ಲಿ 1444 ಸ್ತಂಭಗಳ ಆಧಾರ ಹೊಂದಿರುವ ದೇವಾಲಯದ ಪ್ರಾಂಗಣ ಮತ್ತು ಮೊಗಸಾಲೆಗಳನ್ನು ನೋಡಬಹುದು. ದೇವಾಲಯದ ಒಳ ಆವರಣದಲ್ಲಿ ಸ್ವಾಮಿ ಆದಿದೇವ ಮತ್ತು ಋಷಭದೇವರ ಸುಂದರ ಚಿತ್ರಗಳನ್ನು ಕಾಣಬಹುದಾಗಿದೆ.