Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಲಕ್ಕಾಡ್ » ಹವಾಮಾನ

ಪಾಲಕ್ಕಾಡ್ ಹವಾಮಾನ

ಪಾಲಕ್ಕಾಡ್‍ಗೆ ಸುಡುವ ಬೇಸಿಗೆ (ಮಾರ್ಚ್ ಮತ್ತು ಎಪ್ರಿಲ್) ಮತ್ತು ಭಾರೀ ಮಳೆ ಬೀಳುವ (ಜೂನ್ ಮತ್ತು ಜುಲೈ) ಮಳೆಗಾಲದ ತಿಂಗಳುಗಳನ್ನು ಹೊರತುಪಡಿಸಿ ವರ್ಷದ ಯಾವುದೇ ಸಮಯದಲ್ಲಿ ಬೇಕಾದರು ಭೇಟಿ ಕೊಡಬಹುದು. ಮಳೆಗಾಲದ ನಂತರದ ದಿನಗಳಲ್ಲಿ ಇಲ್ಲಿನ ಜಲಧಾರೆಗಳು ಮತ್ತು ವನ್ಯಜೀವಿಧಾಮಗಳು ಹೊಸಕಳೆಯಿಂದ ನಳನಳಿಸುತ್ತಿರುತ್ತವೆ. ಹಾಗಾಗಿ ಈ ಸಮಯ ಇಲ್ಲಿಗೆ ಭೇಟಿಕೊಡಲು ಅತ್ಯಂತ ಸೂಕ್ತವಾದುದಾಗಿದೆ. ಅಲ್ಲದೆ ಕಲ್ಪದೈ ರಥಯಾತ್ರೆಗೆ ಭೇಟಿಕೊಡಲು ಬಯಸುವವರು ಇಲ್ಲಿಗೆ ನವೆಂಬರ್ ತಿಂಗಳಿನಲ್ಲಿ ಭೇಟಿಕೊಡಬಹುದು. ಇಲ್ಲಿ ಸೆಪ್ಟೆಂಬರ್ ನಿಂದ ಫೆಬ್ರವರಿಯವರೆಗಿನ ಅವಧಿಯು ಎಲ್ಲ ತರಹದ ಸ್ಥಳ ವೀಕ್ಷಣೆಗೆ ಮತ್ತು ಹೊರಾಂಗಣ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ಸಮಯವಾಗಿದೆ.

ಬೇಸಿಗೆಗಾಲ

ಬೇಸಿಗೆಯು ಪಾಲಕ್ಕಾಡಿನಲ್ಲಿ ತುಂಬ ಬಿಸಿಲಿನಿಂದ ಕೂಡಿರುತ್ತದೆ. ಇಲ್ಲಿ ಬೇಸಿಗೆಯು ಮಾರ್ಚ್ ತಿಂಗಳಿನಲ್ಲಿ ಆರಂಭವಾಗಿ ಎಪ್ರಿಲ್‍ವರೆಗೆ ಇರುತ್ತದೆ. ಎಪ್ರಿಲ್ ತಿಂಗಳು ಇಲ್ಲಿ ವರ್ಷದ ಅತ್ಯಂತ ಬಿಸಿಲಿನಿಂದ ಕೂಡಿದ ತಿಂಗಳಾಗಿರುತ್ತದೆ.  ಆಗ ಇಲ್ಲಿ ಉಷ್ಣಾಂಶವು 32°ಸೆಲ್ಶಿಯಸ್‍ನಿಂದ 38°ಸೆಲ್ಶಿಯಸ್‍ವರೆಗೆ ಇರುತ್ತದೆ. ಸುಡುವ ಬಿಸಿಲು ಪ್ರಯಾಣಿಕರಿಗೆ ಅಸೌಕರ್ಯವನ್ನುಂಟು ಮಾಡುವುದರ ಜೊತೆಗೆ ಅನಾರೋಗ್ಯವನ್ನು ತಂದಿಡುವ ಅಪಾಯವು ಉಂಟು. ಹಾಗಾಗಿ ಪ್ರವಾಸಿಗರು ಈ ಕಾಲದಲ್ಲಿ ಇಲ್ಲಿಗೆ ಭೇಟಿ ಕೊಡದಿರುವುದು ಉತ್ತಮ.

ಮಳೆಗಾಲ

ಪಾಲಕ್ಕಾಡ್ ನೈಋತ್ಯ ಮತ್ತು ವಾಯುವ್ಯ ಮಾನ್ಸೂನ್ ಮಾರುತಗಳ ಕಾರಣದಿಂದ ಉತ್ತಮ ಮಳೆಯನ್ನು ಪಡೆಯುತ್ತದೆ. ಮಳೆಗಾಲದ ವರ್ಷಧಾರೆಯು ಈ ನಗರದ ಮೇಲೆ ಜೂನ್‍ನಿಂದ ಸೆಪ್ಟೆಂಬರ್ ಮೊದಲ ಭಾಗದವರೆಗೆ, ನಾಲ್ಕು ತಿಂಗಳ ಕಾಲ ಎಡೆಬಿಡದೆ ಸುರಿಯುತ್ತಲೆ ಇರುತ್ತದೆ. ಭಾರೀ ವರ್ಷಧಾರೆಯು ಪ್ರವಾಸಿಗರನ್ನು ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗದಂತೆ ಮಾಡುವ ಸಂಭವವಿರುತ್ತದೆ. ಹಾಗಾಗಿ ಮಳೆಗಾಲದಲ್ಲಿ ಇಲ್ಲಿಗೆ ಭೇಟಿಕೊಡದಿರುವುದು ಉತ್ತಮ.

ಚಳಿಗಾಲ

ಚಳಿಗಾಲವು ಪಾಲಕ್ಕಾಡಿನಲ್ಲಿ ಅತ್ಯಂತ ಹಿತವಾದ ಕಾಲವಾಗಿದೆ. ಈ ಕಾಲವು ಇಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಮತ್ತು ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೋಳ್ಳಲು ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿ ಚಳಿಗಾಲವು ಡಿಸೆಂಬರ್ ತಿಂಗಳಿನಲ್ಲಿ ಆರಂಭವಾಗಿ ಫೆಬ್ರವರಿ ತಿಂಗಳಿನ ಕಡೆಯ ಭಾಗದವರೆಗು ಇರುತ್ತದೆ. ಇದು ಚಾರಣ ಮಾಡುವ ಸಲುವಾಗಿ  ಈ ಪ್ರಾಂತ್ಯದ ಬೆಟ್ಟ ಗುಡ್ಡಗಳಿಗೆ ಭೇಟಿಕೊಡಲು ಹೇಳಿ ಮಾಡಿಸಿದ ಕಾಲವಾಗಿದೆ.