Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಲಕ್ಕಾಡ್ » ಆಕರ್ಷಣೆಗಳು » ಕಲ್ಪದೈ ದೇವಾಲಯ

ಕಲ್ಪದೈ ದೇವಾಲಯ, ಪಾಲಕ್ಕಾಡ್

1

ಕಲ್ಪದೈ ದೇವಾಲಯವು ಕಲ್ಪದೈ ವಿಶ್ವನಾಥ ಸ್ವಾಮಿ ದೇಗುಲ ಎಂದು ಸಹ ಕರೆಯಲ್ಪಡುತ್ತದೆ. ಈ ದೇವಾಲಯವು ಕೇರಳದ ಅತ್ಯಂತ ಪ್ರಾಚೀನ ಶಿವನ ದೇವಾಲಯಗಳಲ್ಲಿ ಒಂದೆಂದು ಖ್ಯಾತಿ ಗಳಿಸಿದೆ. ಸುಮಾರು ಕ್ರಿ.ಶ 1425 ರಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯದ ವಾಸ್ತುಶಿಲ್ಪವು ಮಂತ್ರಮುಗ್ಧಗೊಳಿಸುವಂತಿದೆ. ಈ ಉದ್ದೇಶಕ್ಕಾಗಿ ಇದು ಭಕ್ತಾಧಿಗಳನ್ನು ಮತ್ತು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಪಾಲಕ್ಕಾಡಿನಿಂದ ಕೆಲವು ಕಿ.ಮೀ ಗಳಷ್ಟು ದೂರದಲ್ಲಿರುವ ಕಲ್ಪದೈ ಎಂಬ ಹಳ್ಳಿಯಲ್ಲಿ ನೆಲೆಗೊಂಡಿರುವ ಈ ದೇವಾಲಯವು ತನ್ನ ಸಾಂಸ್ಕೃತಿಕ ಇತಿಹಾಸದಿಂದಾಗಿ " ದಕ್ಷಿಣ ವಾರಣಾಸಿ" ಎಂದು ಕರೆಯಲ್ಪಡುತ್ತದೆ.

ಕಲ್ಪದೈ ರಥೊಲ್ಸವಂ ಎಂಬುದು ಇಲ್ಲಿನ ಪ್ರಸಿದ್ಧ ಉತ್ಸವವಾಗಿದ್ದು, ಕೇರಳದ ಅತ್ಯಂತ ಪ್ರಸಿದ್ಧ ದೇಗುಲ ಉತ್ಸವಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ. ಇದು ನವೆಂಬರ್ ತಿಂಗಳಿನಲ್ಲಿ ಜರುಗುತ್ತದೆ. ರಥೋಲ್ಸವಂ ಅಥವಾ ರಥ ಯಾತ್ರೆಯು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ತನ್ನತ್ತ ಆಕರ್ಷಿಸುತ್ತಿರುತ್ತದೆ. ಆ ಮೂಲಕ ಈ ಪ್ರಾಂತ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಇದು ಸಹ ಕೊಡುಗೆಯನ್ನು ನೀಡಿದೆ ಎಂದು ಹೇಳಬಹುದು. ಎತ್ತರವಾಗಿ ಕಂಗೊಳಿಸುವ ರಥಗಳು ರಥಬೀದಿಯಲ್ಲಿ ಹಾದು ಬರುವ ಭವ್ಯ ದೃಶ್ಯವನ್ನು ನೋಡುವುದೆ ಒಂದು ಅಂದ. ಈ ದೇವಾಲಯದ ಸುತ್ತಮುತ್ತ ಕೆಲವೊಂದು ಅಗ್ರಹಾರಗಳು ಅಥವಾ ಹಳೆಯ ತಮಿಳು ಬ್ರಾಹ್ಮಣರ ನಿವಾಸಗಳು ಇವೆ. ಇವುಗಳೆಲ್ಲವನ್ನು ಈಗ ಕೇರಳ ಸರ್ಕಾರದ ಪಾರಂಪರಿಕ ರಕ್ಷಣೆಯ ಯೋಜನೆಯಡಿಯಲ್ಲಿ ಸಂರಕ್ಷಿಸಲಾಗುತ್ತಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun