Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಲಕ್ಕಾಡ್ » ಆಕರ್ಷಣೆಗಳು » ಧೋನಿ ಜಲಪಾತ

ಧೋನಿ ಜಲಪಾತ, ಪಾಲಕ್ಕಾಡ್

1

ಧೋನಿ ಜಲಪಾತವು ಅಷ್ಟೇನು ಚಿರಪರಿಚಿತವಲ್ಲದ ಒಂದು ಸುಂದರವಾದ ನೀರಿನ ತಾಣವಾಗಿದೆ.  ಇದು ಪಾಲಕ್ಕಾಡಿಗೆ ಸಮೀಪದಲ್ಲಿರುವ ನೋಡಲೆ ಬೇಕಾದ  ಸುಂದರ ತಾಣವಾಗಿದ್ದು, ಪ್ರಕೃತಿಯ ಅದ್ಭುತವನ್ನು ನೋಡಲು ಬಯಸುವವರು ಭೇಟಿ ನೀಡಲೆ ಬೇಕಾದ ತಾಣವಾಗಿ ಗುರುತಿಸಿಕೊಂಡಿದೆ. ಧೋನಿ ಎನ್ನುವುದು ಪಾಲಕ್ಕಾಡ್‍ನಿಂದ 15 ಕಿ.ಮೀ ದೂರದಲ್ಲಿದ್ದು, ಇದೊಂದು ಗುಡ್ಡಗಾಡಿನ ಸಣ್ಣ ಹಳ್ಳಿಯಾಗಿದೆ. ಈ ಜಲಪಾತದ ಸುತ್ತಲು ಬೆಳೆದಿರುವ  ದಟ್ಟ ಕಾಡು ಇದರ ಸೌಂದರ್ಯವನ್ನು ದ್ವಿಗುಣಗೊಳಿಸಿದೆ. ಈ ಅದ್ಭುತ ಜಲಪಾತವನ್ನು ನೋಡಲು ದೋನಿ ಬೆಟ್ಟದ ತುದಿ ತಲುಪಬೇಕು. ಅದಕ್ಕಾಗಿ 3 ಗಂಟೆಗಳಷ್ಟು ಚಾರಣ ಮಾಡಬೇಕಾಗುತ್ತದೆ. ದಟ್ಟ ಕಾಡಿನ ಮಧ್ಯೆ ಸಾಗುವ ಚಾರಣವು ಪ್ರಕೃತಿಯ ರಮಣೀಯ ಸೊಬಗನ್ನು ನೋಡುವ ಅವಕಾಶವನ್ನು ಒದಗಿಸುತ್ತದೆ. ಅಲ್ಲದೆ ಇಲ್ಲಿ ಕಾಡು ಪ್ರಾಣಿಗಳ ಸುಳಿದಾಟವು ಇರುವುದರಿಂದ ಸುರಕ್ಷಿತತೆಯ ದೃಷ್ಟಿಯಿಂದ ಜಾಗರೂಕತೆ ವಹಿಸುವುದು ಅತ್ಯಾವಶ್ಯಕ.

ಈ ರಮ್ಯ ಮನೋಹರವಾದ ಜಲಪಾತ ನೋಡಲು ಮಳೆಗಾಲದ ನಂತರದ ಅವಧಿ ಅತ್ಯಂತ ಪ್ರಶಸ್ತವಾಗಿರುತ್ತದೆ. ಆಗ ತಾನೆ ಚಿಗುರಿರುವ ಹಸಿರ ವನಸಿರಿ ಮತ್ತು ಧುಮ್ಮಿಕ್ಕಿ ಹರಿಯುವ ಜಲಧಾರೆಯು ನೋಡುಗರನ್ನು ತನ್ಮಯಗೊಳಿಸುತ್ತವೆ. ಈ ಜಲಪಾತಕ್ಕೆ ಸಾಗುವ ಹಾದಿಯಲ್ಲಿ 1857ರಲ್ಲಿ ನಿರ್ಮಿಸಲಾಗಿರುವ ಕವರಕುನ್ನು ಬಂಗಲೆಯ ಅವಶೇಷಗಳಿವೆ. ಇದು ವಸಾಹತುಶಾಹಿ ಅವಧಿಯಲ್ಲಿ ನಿರ್ಮಿಸಲಾದ ಬಂಗಲೆಯಾಗಿದೆ. ಪ್ರವಾಸಿಗರು ಇಲ್ಲಿಗೆ ಹೋಗುವಾಗ ತಮಗೆ ಬೇಕಾದ ಆಹಾರ, ನೀರು ಮತ್ತು ತಿಂಡಿಗಳನ್ನು ತಮ್ಮೊಂದಿಗೆ ಕೊಂಡೊಯ್ಯುವುದು ಉತ್ತಮ. ಏಕೆಂದರೆ ಇಲ್ಲಿಗೆ ಸಮೀಪದಲ್ಲಿ ತಿಂಡಿ ತೀರ್ಥ ಸಿಗುವ ಸಾಧ್ಯತೆಗಳು ತುಂಬಾ ಕಡಿಮೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri