ಪಹಲ್ಗಾಂನಲ್ಲಿರುವ ಅತ್ಯದ್ಭುತವಾದ ಹಿಮಚ್ಛಾಧಿತವಾದ ಪರ್ವತಗಳ ಭವ್ಯ ನೋಟವನ್ನು ನೋಡಲು ಚಾರಣ ಹೇಳಿ ಮಾಡಿಸಿದ ಚಟುವಟಿಕೆಯಾಗಿದೆ. ಇಲ್ಲಿನ ತಂಪಾದ ವಾತಾವರಣವು ಚಾರಣದ ಅನುಭವವನ್ನು ಇಮ್ಮಡಿಗೊಳಿಸುತ್ತದೆ. ಏಪ್ರಿಲ್ ಮತ್ತು ಜೂನ್ ತಿಂಗಳುಗಳು ಚಾರಣಕ್ಕೆ ಹೇಳಿ ಮಾಡಿಸಿದ ಸಮಯವಾಗಿದೆ. ಪಹಲ್ಗಾಂನ ಮತ್ತೊಂದು ವಿಶೇಷವೇನೆಂದರೆ ಇಲ್ಲಿ ನಿಮಗೆ ಸವಾಲೆನಿಸುವಂತಹ ಮತ್ತು ಸಂತೋಷಕ್ಕಾಗಿ ಲಘು ಚಾರಣವೆರಡು ಇಲ್ಲಿ ಲಭ್ಯವಿದೆ. ಲೋನ್ವಿಲಡ್ ಗಲ್ಲಿ, ಬೊಕ್ಟಲ್ ಪಾಸ್ ಮತ್ತು ಪಹಲ್ಗಾಂ- ಸುರು ಕಣಿವೆಗಳು ಪಹಲ್ಗಾಂನ ಅತ್ಯಂತ ಪ್ರಸಿದ್ಧ ಚಾರಣದ ಹಾದಿಗಳಾಗಿವೆ. ಈ ಸ್ಥಳವು ಈ ಊರಿನ ಮೂಲಕ ಸಾಗುವ ಹಲವಾರು ಚಾರಣಗಳ ಮಾರ್ಗಕ್ಕೆ ಮೂಲ ನೆಲೆಯಾಗಿ ಸಹ ಕಾರ್ಯನಿರ್ವಹಿಸುತ್ತದೆ. ಇದರ ಜೊತೆಗೆ ಅರು ಮೂಲಕ ಸಾಗುವ ಕೊಲಹೊಯ್ ಗ್ಲೇಸಿಯರ್ ಚಾರಣದ ಹಾದಿ ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದ ಚಾರಣದ ಮಾರ್ಗವಾಗಿದೆ.