ಗಾಲ್ಫ್ ಪಹಲ್ಗಾಂನ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಇಲ್ಲಿ 18 ಕುಳಿಗಳ ಗಾಲ್ಫ್ ಮೈದಾನವಿದೆ. ಸಮುದ್ರ ಮಟ್ಟದಿಂದ 2400 ಮೀಟರ್ ಎತ್ತರದಲ್ಲಿರುವ ಈ ಗಾಲ್ಫ್ ಮೈದಾನವು ನೋಡುಗರ ಮನಸೂರೆಗೊಳ್ಳುವ ದೇವದಾರು ಕಾಡುಗಳು ಮತ್ತು ಹಸಿರಿನಿಂದ ಬೆಟ್ಟಗಳಿಂದ ಕೂಡಿದ ದೃಶ್ಯವೈಭವವನ್ನು ಒದಗಿಸುತ್ತದೆ. ಗಾಲ್ಫ್ ಆಟಗಾರರನ್ನು ಸೆಳೆಯುವ ಸಲುವಾಗಿ ಇಲ್ಲಿ ಕ್ಲಬ್ಬನ್ನು ಸ್ಥಾಪಿಸಲಾಗಿದೆ. ಅಲ್ಲದೆ ಅವರಿಗೆ ಚಿನ್ನದ ಸಣ್ಣ ಪೆಟ್ಟಿಗೆಗಳನ್ನು ಸಹ ಬಾಡಿಗೆಗೆ ನೀಡಲಾಗುತ್ತದೆ. ಪ್ರವಾಸಿಗರು ಇಲ್ಲಿ ಗಂಟೆಗೆ ಇಂತಿಷ್ಟು ನಿಗದಿತ ದರವನ್ನು ಪಾವತಿಸಿ ಗಾಲ್ಫ್ ಆಡಬಹುದು.