ಚಂದನ್ವರಿಯು ಸಮುದ್ರ ಮಟ್ಟದಿಂದ 2923 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಪ್ರವಾಸಿಗರು ಪಹಲ್ಗಾಂನಿಂದ 16 ಕಿ.ಮೀ ದೂರ ಕ್ರಮಿಸಿದರೆ ಇಲ್ಲಿಗೆ ತಲುಪಬಹುದು. ಇಲ್ಲಿನ ಹಿಮಚ್ಛಾಧಿತವಾದ ಪರ್ವತಗಳು ಮತ್ತು ಮಂತ್ರಮುಗ್ಧಗೊಳಿಸುವಂತಹ ಪ್ರಾಕೃತಿಕ ಸೌಂದರ್ಯವು ಹಲವಾರು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಇವುಗಳಲ್ಲದೆ ಹಿಮಚ್ಛಾಧಿತವಾದ ಸೇತುವೆ ಮತ್ತು ಹಿಮನದಿಗಳನ್ನು ಸಹ ಇಲ್ಲಿಗೆ ಸಮೀಪದಲ್ಲಿ ಕಾಣಬಹುದು. ಚಂದನ್ವರಿಯು ಅಮರನಾಥ್ ಯಾತ್ರಿಕರು ಬಂದು ಕೂಡುವ ತಾಣವಾಗಿ ಸಹ ಸೇವೆ ಸಲ್ಲಿಸುತ್ತಿದೆ. ಪ್ರವಾಸಿಗರು ಸಮತಟ್ಟಾದ ಭೂಭಾಗದಲ್ಲಿ ಪ್ರಯಾಣಿಸಿ ಚಂದನ್ವರಿಗೆ ಬಂದು ತಲುಪಬಹುದು. ಪಹಲ್ಗಾಂನಿಂದ ಇಲ್ಲಿಗೆ ಮಿನಿಬಸ್ಸುಗಳು ಲಭ್ಯವಿದ್ದು, ಪ್ರವಾಸಿಗರನ್ನು ಅವರ ಗಮ್ಯಸ್ಥಾನಕ್ಕೆ ತಲುಪಿಸುತ್ತವೆ.