ಇದು ಪಚಮಡಿಯ ಸಂಪೂರ್ಣ ನೋಟವನ್ನು ನೀಡುತ್ತದೆ. 1857 ರಲ್ಲಿ ಕ್ಯಾಪ್ಟನ್ ಫಾರ್ಸಿಥ್ ಇಲ್ಲಿಂದ ಪಚಮಡಿಯನ್ನು ಕಂಡುಹಿಡಿದನು. ಆದ್ದರಿಂದ ಇದನ್ನು ಫಾರ್ಸಿಥ್ ಪಾಯಿಂಟ್ ಎಂದು ಕೂಡ ಕರೆಯಲಾಗುತ್ತದೆ. ಇದನ್ನು ಬ್ರಿಟಿಷರು ಅಭಿವೃಧ್ಧಿ ಪಡಿಸಿದರು. ವಸಾಹತು ಅವಧಿಯಲ್ಲಿ ಇದನ್ನು ಪ್ರಿಯದರ್ಶಿನಿ ಪಾಯಿಂಟ್ ಎಂದು ಹೆಸರಿಡಲಾಯಿತು. ಇಲ್ಲಿಂದ ಪಚಮಡಿ ಪರ್ವತದ ಮತ್ತು ಹಂಡಿ ಖೋಹ್ ನ ಸಂಪೂರ್ಣ ನೋಟ ಕಾಣಬಹುದು. ಇಲ್ಲಿ ಸೂರ್ಯಾಸ್ತ ನೋಡಲು ಬಹಳ ಸುಂದರವಾಗಿರುತ್ತದೆ.