Search
  • Follow NativePlanet
Share

ಪಚಮಡಿ - ನಿಸರ್ಗಧಾಮದ ನೆಲೆಯಲ್ಲಿ

27

ಪಚಮಡಿ ಮಧ್ಯಪ್ರದೆಶದಲ್ಲಿರುವ ಒಂದೇ ಒಂದು ಗಿರಿಧಾಮ. ಪಚಮಡಿಯನ್ನು ಸತ್ಪುರದ  ರಾಣಿ ಎಂದೇ ಕರೆಯುತ್ತಾರೆ. ಇದು ಸತ್ಪುರ ಶ್ರೇಣಿಯಲ್ಲಿ ನೆಲೆಸಿದ್ದು, ಸಮುದ್ರ ಮಟ್ಟದಿಂದ 1110 ಮೀಟರ್ ಎತ್ತರದಲ್ಲಿದೆ.

ಪಚಮಡಿ - ಬುಡಕಟ್ಟು ಇತಿಹಾಸ

ಪಚಮಡಿ ಗೊಂಡ್ ಬುಡಕಟ್ಟು ರಾಜವಂಶದ ರಾಜಧಾನಿಯಾಗಿತ್ತು. ಗೊಂಡ್ ಬುಡಕಟ್ಟು ರಾಜವಂಶದ ರಾಜ ಬವುತ್ ಸಿಂಗ್ ಆಗಿದ್ದ. 1857 ರಲ್ಲಿ ಬ್ರಿಟನ್ನಿನ ಸೇನೆಯ ಕ್ಯಾಪ್ಟನ್ ಜೇಮ್ಸ್ ಫಾರ್ಸಿತ್ ಈ ಗಿರಿಧಾಮವನ್ನು ಶೋಧಿಸಿ ಜಗತ್ತಿಗೆ ಪರಿಚಯಿಸಿದ. ಹೀಗೆ ಪಚಮಡಿ ಆಧುನಿಕ ಬೆಳವಣಿಗೆಗೆ  ಜೇಮ್ಸ್ ಫಾರ್ಸಿತ್ ಕಾರಣನಾದ. ಅವನಲ್ಲಿದ್ದ ಉತ್ಸಾಹವೆ ಈ ಸುಂದರ ಪ್ರಕೃತಿ ಮಡಿಲನ್ನು ಒಂದು ಗಿರಿಧಾಮವಾಗಿ ಪರಿವರ್ತಿಸಲು ಕಾರಣವಾಯಿತು. ಮಧ್ಯ ಭಾರತದಲ್ಲೇ ಇದು ಅತಿ ಎತ್ತರದ ಪ್ರದೆಶವಾದದ್ದರಿಂದ ಬ್ರಿಟೀಷರು ಇದನ್ನು ಸೇನಾ ಕೇಂದ್ರವಾಗಿ ಮಾಡಿಕೊಂಡಿದ್ದರು. 2009 ರಲ್ಲಿ ಯುನೆಸ್ಕೋ ಇದನ್ನು ಜೀವಮಂಡಲ(ಬಯೋಸ್ಫೀಯರ್) ಎಂದು ಗುರುತಿಸಿ ಘೋಷಿಸಿತು.

ಪಚಮಡಿ ಮತ್ತು ಸುತ್ತಮುತ್ತಲ ಪ್ರವಾಸಿ ಕೇಂದ್ರಗಳು

ಪಚಮಡಿ ಪ್ರವಾಸೋದ್ಯಮ ತನ್ನ ವೀಕ್ಷಕರಿಗೆ ನೀಡಲು ಅನೇಕ ಸ್ಥಾನ ಹೊಂದಿದೆ. ಮಧ್ಯಭಾರತದಲ್ಲೆ ಅತಿ ಎತ್ತರದಲ್ಲಿ ನೆಲೆಸಿದೆ ಎನ್ನಲಾದ ವಿಂಧ್ಯಾ-ಸಾತ್ಪುರಾ ಪರ್ವತ ಶ್ರೇಣಿಯಲ್ಲಿರುವ ತಾಣ ಧೂಪ್‍ಗಢ್ ಪಚಮಡಿಯಲ್ಲಿದೆ. ಕುತೂಹಲಕಾರಿಯಾಗಿ, ಪಚಮಡಿ ಒಂದು ತಟ್ಟೆ ಆಕಾರದ ಗಿರಿಧಾಮವಾಗಿದೆ. ಪಚಮಡಿಯಲ್ಲಿರುವ ಪಚಮಡಿ ಮಿಲಿಟರಿ ಕಂಟೋನ್ಮೆಂಟ್ ಸಹ ಜನಪ್ರಿಯವಾಗಿದೆ.

ಪಚಮಡಿ ಇಲ್ಲಿರುವ  ಪ್ರಾಚೀನ ಗುಹೆಗಳು, ಸ್ಮಾರಕಗಳು, ಜಲಪಾತಗಳು, ನೈಸರ್ಗಿಕ ಸೌಂದರ್ಯ, ಅರಣ್ಯ ಮತ್ತು ಸಸ್ಯ ಮತ್ತು ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ. ರಾಕಿ ಬೆಟ್ಟಗಳ ದಪ್ಪ ಹಸಿರು ಬೆಟ್ಟ, ದಟ್ಟ ಕಾಡು, ಕ್ಯಾಸ್ಕೇಡಿಂಗ್ ಜಲಪಾತಗಳು ಮತ್ತು ಸ್ನೇಹಶೀಲ ಹವಾಮಾನ ಇದು ಪ್ರಕೃತಿ ದೇವಿಯ ಒಂದು ನೆಲೆಯಾಗಿಸಿಕೊಂಡ ಸ್ಥಳವೆಂದೇ ಹೇಳಬಹುದು. ಪಚಮಡಿ ಸೂರ್ಯಾಸ್ತದ ಸೌಂದರ್ಯ ಅನುಭವಿಸಲು ಒಂದು ಸುಂದರ ಸ್ಥಳ ಎನ್ನಬಹುದು. ಹಂಡಿ ಖೋಹ್, ಜಟಾ ಶಂಕರ್ ಗುಹೆ, ಪಾಂಡವ ಗುಹೆಗಳು, ಅಪ್ಸರಾ ವಿಹಾರ್, ಬೀ ಫಾಲ್ಸ್, ಡಚೆಸ್  ಫಾಲ್ಸ್ ಇತ್ಯಾದಿ ಪಚಮಡಿಯ ಆಕರ್ಷಕ ಸ್ಥಳಗಳು.

ಪಚಮಡಿ - ಯಾವಾಗ ಮತ್ತು ಹೇಗೆ ಹೋಗಬೇಕು

ಪಚಮಡಿ ವರ್ಷಪೂರ್ತಿ ಒಳ್ಳೆಯ ವಾತಾವರಣವನ್ನು ಹೊಂದಿರುತ್ತದೆ. ಆದರೂ ಅಕ್ಟೋಬರ್ ನಿಂದ ಜೂನ್ ಇಲ್ಲಿ ಭೇಟಿ ನೀಡಲು ಉತ್ತಮ ಕಾಲ ಎನ್ನಲಾಗಿದೆ. ಇಲ್ಲಿನ ಆಹ್ಲಾದಕರ ವಾತಾವರಣ ಪ್ರವಾಸಿಗರಿಗೆ ಹೆಚ್ಚು ಉತ್ಸಾಹ ನೀಡುತ್ತದೆ. ಇಲ್ಲಿಗೆ ತಲುಪಲು ಭೂಪಾಲ್ ವರೆಗೆ ರೈಲು ಅಥವಾ ವಿಮಾನದ ಮೂಲಕ ತಲುಪಿ ಅಲ್ಲಿಂದ ರಸ್ತೆ ಮಾರ್ಗದ ಮೂಲಕ ತಲುಪಬಹುದು.

ಪಚಮಡಿ ಪ್ರಸಿದ್ಧವಾಗಿದೆ

ಪಚಮಡಿ ಹವಾಮಾನ

ಉತ್ತಮ ಸಮಯ ಪಚಮಡಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪಚಮಡಿ

  • ರಸ್ತೆಯ ಮೂಲಕ
    ಮಧ್ಯ ಪ್ರದೇಶದ ಅಕ್ಕಪಕ್ಕದಿಂದ ಪಚಮಡಿಗೆ ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದು. ಭೂಪಾಲ್, ಪಿಪರಿಯ ಮತ್ತು ನಾಗಪುರದ ಮೂಲಕ ಪಚಮಡಿಗೆ ರಸ್ತೆ ಮೂಲಕ ಬಸ್ಸುಗಳು ಹಾದುಹೋಗುತ್ತವೆ. ಇತರ ಬಸ್ಸುಗಳು ಮತ್ತು ಟ್ಯಾಕ್ಸಿ ಗಳು ಕೂಡ ದೊರೆಯುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಹೌರಾ - ಮುಂಬೈ ರೈಲು ಮಾರ್ಗದಲ್ಲಿ ಬರುವ ಜಬಲ್ಪೂರ್ ಹತ್ತಿರದ ರೈಲು ನಿಲ್ದಾಣ. ಪಚಮಡಿಯಿಂದ 47 ಕಿ ಮೀ. ದೂರವಿದೆ. ಆದಾಗ್ಯೂ ಭೋಪಾಲ್ ಮುಖ್ಯ ರೈಲು ನಿಲ್ದಾಣ. ಪಚಮಡಿ ಮತ್ತು ಬೋಪಾಲ್ ನ ಅಂತರ 200 ಕಿ ಮೀ. ಪಚಮಡಿಯನ್ನು ನಾಗಪುರದ ಮೂಲಕವೂ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಭೋಪಾಲ್ ನ ರಾಜ ಭೋಜ್ ಏರ್ಪೋರ್ಟ್ ಹತ್ತಿರದ ವಿಮಾನ ನಿಲ್ದಾಣ. ಇದು ಪಚಮಡಿಯಿಂದ 195 ಕಿ ಮೀ ಅಂತರದಲ್ಲಿದೆ. ದೆಹಲಿ, ಮುಂಬೈ ಮತ್ತು ಗ್ವಾಲಿಯರ್ ನಿಂದ ಇಲ್ಲಿಗೆ ಸುಲಭವಾಗಿ ತಲುಪಬಹುದು. ಭೂಪಾಲ್ ನಿಂದ ಬಸ್ ಮತ್ತು ಟಾಕ್ಸಿ ಮೂಲಕ ಪಚಮಡಿಗೆ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu