ಓರಛಾ ರಿವರ್ ರಾಫ್ಟಿಂಗ್ ಅತ್ಯಂತ ಸಾಹಸಿಗ ಮಕ್ಕಳು ಮತ್ತು ಜನರನ್ನು ದೊಡ್ಡ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ. ಅದ್ಭುತ ಸ್ಮಾರಕ ಸಮಾಧಿಗಳು ಮತ್ತು ಓರಛಾದ ಕಡಿಮೆ ಕಲುಷಿತ ಪರಿಸರದ ನಡುವೆ ಬೇತ್ವಾ ನದಿ ವಿಂಧ್ಯಪರ್ವತದ ವ್ಯಾಪ್ತಿಯ ಯಮುನಾ ನದಿಗೆ ಹರಿಯುತ್ತದೆ. ಇಲ್ಲಿ ಪ್ರವಾಸಿಗರು ರಾಫ್ಟಿಂಗ್ ರೂಪದಲ್ಲಿ ಸಾಹಸದ ಬಹಳಷ್ಟು ಅನುಭವ ಪಡೆಯಬಹುದು. ಓರಛಾ ರಿವರ್ ರಾಫ್ಟಿಂಗ್, ನೀರು ಮತ್ತು ಸಾಹಸ ಪ್ರೇಮಿಗಳು ತಪ್ಪಿಸಿಕೊಳ್ಳಲೇ ಬಾರದು. ಅದ್ಭುತ ಸ್ಮಾರಕಗಳ ಉಪಸ್ಥಿತಿಯಲ್ಲಿ ಸಸ್ಯ ಮತ್ತು ಪ್ರಾಣಿ ಪ್ರಪಂಚದಿಂದ ಸುತ್ತುವರಿದ ಓರಛಾದಲ್ಲಿನ ಬೇತ್ವಾ ನದಿಯಲ್ಲಿ ನೀರಿನ ಕ್ರೀಡೆ ರೋಮಾಂಚನಕಾರಿ. ಆದಾಗ್ಯೂ, ಪ್ರವಾಸಿಗರಿಗೆ ವೃತ್ತಿಪರರುಗಳೊಂದಿಗೆ ಮಾತ್ರ ರಾಫ್ಟಿಂಗ್ ಹೋಗುವುದಕ್ಕೆ ಸಲಹೆ ಮಾಡಲಾಗುತ್ತದೆ. ಓರಛಾ ರಾಫ್ಟಿಂಗ್ ಅದ್ಭುತ, ಖಂಡಿತವಾಗಿಯೂ ನಿಮ್ಮ ಹೃದಯದಲ್ಲಿ ಜೀವಮಾನದ ಸ್ಮರಣೀಯ ಅನುಭವ ನೀಡುತ್ತದೆ.