Search
  • Follow NativePlanet
Share

ಓರಛಾ ಪ್ರವಾಸೋದ್ಯಮ - ಒಂದು ರಾಜವಂಶದ ಸೃಷ್ಟಿ

23

ಭೂಮಿಯಲ್ಲಿ ಅದ್ಭುತಗಳನ್ನು ಬ್ರಹ್ಮ ಸೃಷ್ಟಿ ಮಾಡಿದ್ದಾನೆ ಎಂದು ನಂಬಲಾಗುತ್ತದೆ. ಅದಕ್ಕೆ ತಕ್ಕಂತೆ ನಂಬಲಸಾಧ್ಯವಾದ, ಮಾನವ ಬುದ್ಧಿಗೆ ನಿಲುಕದ ಹಲವಾರು ಪ್ರಕೃತಿ ವೈಚಿತ್ರ್ಯಗಳು ನಮ್ಮ ಸುತ್ತಲೂ ಇವೆ. ಇಂತಹ ಅದ್ಭುತಗಳನ್ನು ಕಣ್ಣಿನಿಂದ ನೋಡಬಹುದೇ ಹೊರತು ಅವುಗಳ ಒಳಾರ್ಥಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲ!

ಈ ಭೂಮಿಯಲ್ಲಿನ ಎಲ್ಲವೂ ಬ್ರಹ್ಮನಿಂದ ಸೃಷ್ಟಿಯಾಗಿದ್ದು ಗೊಂದಲಮಯವಾಗಿದ್ದರೂ ಒರಛಾದಲ್ಲಿನ ಅವರ್ಣನೀಯ ಅದ್ಭುತಗಳಂತೂ ಅಲ್ಲಿನ ರಾಜಮನೆತನಗಳಿಂದಲೇ ಸೃಷ್ಟಿಯಾಗಿದ್ದು ಎಂದರೆ ತಪ್ಪಾಗಲಾರದು! ಅಂತಹ ಸುಂದರವಾದ ಸ್ಥಳ ಮದ್ಯಪ್ರದೇಶದ ಓರಛಾ. ಚುಮುಚುಮು ಚಳಿಯಲ್ಲಿ ಓರಛಾವನ್ನೊಮ್ಮೆ ಸುತ್ತಿಬಂದರೆ ಎಲ್ಲರ ಜೀವನದಲ್ಲಿ ಹೊಸ ಚೈತನ್ಯ ಮೂಡುವುದರಲ್ಲಿ ಸಂಶಯವೇ ಇಲ್ಲ!

ಬೇತ್ವಾ ನದಿಯ ತೋಳುಗಳಲ್ಲಿ, ಭಾರತದ ಹೃದಯಭಾಗವಾದ ಮಧ್ಯ ಪ್ರದೇಶದ ತಿಕಂಗರ್ ಜಿಲ್ಲೆಯಲ್ಲಿದೆ ಓರಛಾ. ಬುಂದೇಲ್ಖಂಡ್ ಪ್ರದೇಶದ ಪ್ರಸಿದ್ಧ ರಾಜ ರುದ್ರ ಪ್ರತಾಪ್ ಸಿಂಗ್ ನಿಂದ 1501 ರಲ್ಲಿ ಸ್ಥಾಪಿತವಾದ ಓರಛಾ, ಉತ್ತರಪ್ರದೇಶದ ಝಾನ್ಸಿಯಿಂದ ಕೇವಲ 15 ಕಿ. ಮೀ ದೂರದಲ್ಲಿದೆ. ಈ ಸ್ಥಳದ ಸಂಸ್ಥಾಪಕ  ಮಹಾರಾಜ ರುದ್ರ ಪ್ರತಾಪ್ ಸಿಂಗ್ ಓರಛಾ ಪ್ರದೇಶದ ಪ್ರಥಮ ರಾಜನಾಗಿದ್ದ.

ಓರಛಾದಲ್ಲಿನ ಮತ್ತು ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳು

ರಾಜನಿಂದ ಮೊದಲಬಾರಿಗೆ ಆಳಲ್ಪಟ್ಟ ಓರಛಾ, ಗಮನಾರ್ಹವಾದ ರಚನೆಯನ್ನು ಹೊಂದಿದ್ದು, ಖಂಡಿತವಾಗಿಯೂ ನಿಜವಾದ ಮೆಚ್ಚುಗೆ ಅರ್ಹವಾದಂಥದ್ದು. ಚಂದ್ರಶೇಖರ್ ಆಜಾದ್ ಸ್ಮಾರಕ, ಛತ್ರಿಸ್, ದುಜಿ ಕಿ ಹವೇಲಿ, ದಿನ್ಮನ್ ಹರ್ದೌಲ್ (Dinman Hardaul) ಅರಮನೆ, ಫೂಲ್ ಬಾಗ್  ಮೊದಲಾದವು ಓರಛಾದ ಕೆಲವು ಅದ್ಭುತ ತಾಣಗಳು. ಓರಛಾ ಪ್ರವಾಸೋದ್ಯಮ, ತನ್ನ ಪ್ರವಾಸಿಗರಿಗೆ ರಾಜ ಮಹಲ್, ರಾಣಿ ಮಹಲ್, ಸುಂದರ್ ಮಹಲ್, ಲಕ್ಷ್ಮಿ ನಾರಾಯಣ ದೇವಾಲಯ ಮತ್ತು ಇನ್ನೂ ಹಲವು ತಾಣಗಳನ್ನು ವೀಕ್ಷಿಸುವ ಸೌಲಭ್ಯ ನೀಡುತ್ತದೆ. ಓರಛಾದಲ್ಲಿ, ಸಾಹಸ ಪ್ರಿಯ ಪ್ರವಾಸಿಗರಿಗಾಗಿ ರಿವರ್ ರಾಫ್ಟಿಂಗ್ ಸೌಲಭ್ಯವಿದೆ. ಓರಛಾ ತನ್ನ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೂ ಹೆಸರುವಾಸಿಯಾಗಿದೆ. ಇದು ಒಂದು ದೊಡ್ಡ ಪಟ್ಟಣವಲ್ಲ, ಆದರೆ ಓರಛಾ ಜನರು ಉತ್ಸವಗಳ ಆಚರಣೆಯ ಸಂದರ್ಭದಲ್ಲಿ ಪರಸ್ಪರ ಅರ್ಥೈಸಿಕೊಳ್ಳುವಿಕೆಯನ್ನು ಕಾಣಬಹುದು.

ಓರಛಾ - ಅಗಾಧ ಸೌಂದರ್ಯವನ್ನು ಹೊಂದಿರುವ ಸ್ಥಳ

ಓರಛಾ ಪ್ರವಾಸೋದ್ಯಮವು, ಹೆಮ್ಮೆಯಿಂದ ಈ ಪ್ರಸಿದ್ಧ ಪಟ್ಟಣದ ಮಿತಿಗಳನ್ನು ಒಳಗೆ ಅಡಗಿರುವ ಸೌಂದರ್ಯವನ್ನು ಆನಂದಿಸಲು ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಈ ಸುಂದರವಾದ ಪಟ್ಟಣದಲ್ಲಿ ಮತ್ತು ಪಟ್ಟಣದ ಸುತ್ತಮುತ್ತ ನೋಡಿ ಆನಂದಿಸಲು ಹಲವಾರು ಮಹಲ್ ಗಳು, ದೇವಾಲಯಗಳು, ಅರಮನೆಗಳು ಮತ್ತು ಸುಂದರ ರಚನೆಗಳು ಸಾಕಷ್ಟಿವೆ. ಓರಛಾ ಸ್ಥಳದ ಅದ್ಭುತ ನೆನಪುಗಳಿಂದ ಹೊರಬರಲು ಕನಿಷ್ಠ ನಾಲ್ಕು ದಿನಗಳನ್ನು ವ್ಯಯಿಸಲೇಬೇಕು.

ಓರಛಾ ತಲುಪುವುದು ಹೇಗೆ

ಝಾನ್ಸಿ ಮತ್ತು ಓರಛಾ ನಡುವಿನ ಅಂತರ ಕೇವಲ 16 ಕಿ.ಮೀ ಗಳು ಮಾತ್ರ. ರಸ್ತೆ ಸಾರಿಗೆ ಪ್ರಯಾಣಕ್ಕೆ ಅತ್ಯಂತ ಅನುಕೂಲಕರವಾದ ಮಾರ್ಗ. ಓರಛಾದಲ್ಲಿ ಹೆಚ್ಚಿನ ಸಮಯ ಆಹ್ಲಾದಕರ ವಾತಾವರಣವಿರುತ್ತದೆ.

ಓರಛಾ ಪ್ರಸಿದ್ಧವಾಗಿದೆ

ಓರಛಾ ಹವಾಮಾನ

ಉತ್ತಮ ಸಮಯ ಓರಛಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಓರಛಾ

  • ರಸ್ತೆಯ ಮೂಲಕ
    ಓರಛಾವನ್ನು ಸುಲಭವಾಗಿ ಮತ್ತು ಅನುಕೂಲಕರವಾಗಿ ಮಧ್ಯಪ್ರದೇಶದ ಎಲ್ಲಾ ಪ್ರಮುಖ ನಗರಗಳಿಂದ ತಲುಪಬಹುದು. ಓರಛಾ ರಸ್ತೆಗಳನ್ನು ಚೆನ್ನಾಗಿ ನಿರ್ವಹಿಸಲಾಗಿದೆ. ಓರಛಾಕ್ಕೆ ಮಧ್ಯ ಪ್ರದೇಶದ ಎಲ್ಲ ಪ್ರಮುಖ ಸ್ಥಳಗಳಿಂದ ನಿಯಮಿತವಾಗಿ ಬಸ್ ವ್ಯವಸ್ಥೆಯಿದೆ. ನೆರೆಯ ಸ್ಥಳಗಳಿಂದ ಓರಛಾವನ್ನು ತಲುಪಲು ಟ್ಯಾಕ್ಸಿಯನ್ನು ಬಾಡಿಗೆಗೆ ನಿಗದಿಪಡಿಸಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಓರಛಾದಿಂದ 16 ಕಿ. ಮೀ ದೂರದಲ್ಲಿರುವ ಝಾನ್ಸಿ ರೈಲ್ವೆ ಸ್ಟೇಷನ್ ಹತ್ತಿರದ ನಿಲ್ದಾಣವಾಗಿದೆ. ಇದು ಒಂದು ಪ್ರಮುಖ ರೈಲ್ವೆ ಕೇಂದ್ರವಾಗಿರುವ ಕಾರಣ, ಭಾರತದ ಬಹುತೇಕ ಸ್ಥಳಗಳಿಗೆ ಇಲ್ಲಿಂದ ರೈಲ್ವೆ ಸೌಲಭ್ಯವಿದೆ. ಝಾನ್ಸಿ ಗೆ ಒಂದು ಸುಲಭವಾಗಿ ಬಸ್ ಮೂಲಕ ಓರಛಾವನ್ನು ತಲುಪಬಹುದು. ಟ್ಯಾಕ್ಸಿಗಳು ಕೂಡ ಓರಛಾ ತಲುಪಲು ಝಾನ್ಸಿ ರೈಲ್ವೆ ನಿಲ್ದಾಣದಿಂದ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಝಾನ್ಸಿ ವಿಮಾನ ನಿಲ್ದಾಣ ಓರಛಾದಿಂದ 16 ಕಿ. ಮೀ ದೂರದಲ್ಲಿರುವ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣದಿಂದ ಓರಛಾ ತಲುಪಲು ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು. ಆದಾಗ್ಯೂ, ವಿಮಾನ ನಿಲ್ದಾಣದಿಂದ ಅಗ್ಗದ ಸಾರಿಗೆ ಬಸ್ ಸೌಲಭ್ಯವಿದೆ. ವಿಮಾನ ಅಂತರ ಬಹಳ ಕಡಿಮೆ ಇರುವುದರಿಂದ ಝಾನ್ಸಿಗೆ ಬಂದು ಓರಛಾವನ್ನು ಸುಲಭವಾಗಿ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun