Search
  • Follow NativePlanet
Share
ಮುಖಪುಟ » ಸ್ಥಳಗಳು » ಊಟಿ » ಹವಾಮಾನ

ಊಟಿ ಹವಾಮಾನ

ಅಕ್ಟೋಬರ್, ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳು ಊಟಿಗೆ ಭೇಟಿಕೊಡಲು ಅತ್ಯುತ್ತಮ ತಿಂಗಳುಗಳಾಗಿವೆ. ಈ ತಿಂಗಳುಗಳಲ್ಲಿ ಇಲ್ಲಿನ ಉಷ್ಣಾಂಶವು 25 ಡಿಗ್ರಿಯ ಆಸು ಪಾಸಿನಲ್ಲಿರುತ್ತದೆ. ಹಾಗಾಗಿ ಇಲ್ಲಿಗೆ ಭೇಟಿ ಕೊಡುವುದು ಮೈಮನಗಳಿಗೆ ಮುದ ನೀಡುತ್ತದೆ. ಅಲ್ಲದೆ ಸ್ಥಳ ವೀಕ್ಷಣೆಗು ಸಹ ಇದು ಅನುಕೂಲವನ್ನುಂಟು ಮಾಡುತ್ತದೆ. ಈ ಮೂರು ತಿಂಗಳುಗಳಲ್ಲಿ ರಾತ್ರಿಯ ಉಷ್ಣಾಂಶವು ಸಹ ಆಹ್ಲಾದಕರವಾಗಿರುತ್ತದೆ.  ಜೊತೆಗೆ ಈ ತಿಂಗಳುಗಳಲ್ಲಿ ಉಣ್ಣೆಯ ಬಟ್ಟೆಗಳಲ್ಲಿ ಹುದುಗಿ ಹೋಗ ಬೇಕಾಗಿರುವುದಿಲ್ಲ. ಯಾರು ಬೇಕಾದರು ಆರಾಮವಾಗಿ ಇಲ್ಲಿ ಕಾಲ ಕಳೆಯುವಂತಹ ವಾತಾವರಣವಿರುತ್ತದೆ.

ಬೇಸಿಗೆಗಾಲ

ಊಟಿಯಲ್ಲಿ ಬೇಸಿಗೆಯು ಮಾರ್ಚ್ ನಿಂದ ಆರಂಭವಾಗಿ ಮೇ ಮೊದಲ ವಾರದವರೆಗೆ ಇರುತ್ತದೆ. ವಿಶೇಷವೆಂದರೆ ಊಟಿಯಲ್ಲಿ ಬೇಸಿಗೆಯು ದಕ್ಷಿಣ ಭಾರತದ ಇನ್ನಿತರ ನಗರಗಳಂತೆ ಬಿಸಿಲಿನಿಂದ ಮತ್ತು ಆರ್ದ್ರತೆಯಿಂದ ಕೂಡಿರುವುದಿಲ್ಲ. ಇಲ್ಲಿನ ಉಷ್ಣಾಂಶವು ಯಾವುದೇ ಸಂದರ್ಭದಲ್ಲಿ 25 ಡಿಗ್ರಿಯನ್ನು ದಾಟುವುದಿಲ್ಲ. ದಿನದ ಸಮಯದಲ್ಲಿ ಒಮ್ಮೊಮ್ಮೆ ಸುಡುವ ಬಿಸಿಲಿದ್ದರೂ, ರಾತ್ರಿಗಳು ಮಾತ್ರ ಖಂಡಿತವಾಗಿ ತಂಪಾಗಿ ಮತ್ತು ಆಹ್ಲಾದಕತೆಯಿಂದ ಕೂಡಿರುತ್ತವೆ.

ಮಳೆಗಾಲ

ಊಟಿಯಲ್ಲಿ ಮಳೆಗಾಲವು ಮೇ ಮೊದಲ ವಾರದಲ್ಲಿ ಆರಂಭವಾಗಿ ಸೆಪ್ಟೆಂಬರ್ ನಲ್ಲಿ ಅಂತ್ಯಗೊಳ್ಳುತ್ತದೆ. ಮಳೆಗಾಲದಲ್ಲಿ ಇಲ್ಲಿನ ಉಷ್ಣಾಂಶವು 20 ಡಿಗ್ರಿಯವರೆಗೆ ಕುಸಿಯುತ್ತದೆ. ಈ ಗಿರಿಧಾಮದಲ್ಲಿ ಮಳೆಗಾಲದಲ್ಲಿ ಅತಿ ಹೆಚ್ಚಿನ ಮಳೆಯಾಗುತ್ತದೆ. ಮಳೆಯಿಂದಾಗಿ ಇಲ್ಲಿನ ಕಾಡುಗಳು ಹಚ್ಚ ಹಸಿರಿನಿಂದ ನಳನಳಿಸುತ್ತವೆ.

ಚಳಿಗಾಲ

ಚಳಿಗಾಲವು ಊಟಿಯಲ್ಲಿ ಅತ್ಯಂತ ಚಳಿ ಮತ್ತು ಒಣ ಹವೆಯಿಂದ ಕೂಡಿರುತ್ತವೆ. ಅಧಿಕ ವೇಗದಿಂದ ಬೀಸುವ ಗಾಳಿಯು ಇಲ್ಲಿ ಯಾವುದೇ ರೀತಿಯ ಬೆಚ್ಚನೆಯ ಉಡುಪಿಲ್ಲದೆ ಹೊರಗೆ ಬರುವುದು ಅಸಾಧ್ಯ ಎಂಬಂತಹ ವಾತಾವರಣವನ್ನು ನಿರ್ಮಿಸುತ್ತದೆ. ಚಳಿಗಾಲವು ಇಲ್ಲಿ ಅಕ್ಟೋಬರ್ ನಲ್ಲಿ ಆರಂಭವಾಗಿ ಫೆಬ್ರವರಿಯವರೆಗೆ ಇರುತ್ತದೆ. ಜನವರಿಯು ಇಲ್ಲಿ ಅತ್ಯಂತ ಚಳಿಯ ತಿಂಗಳಾಗಿ ಗುರುತಿಸಲ್ಪಟ್ಟಿದೆ. ಈ ಅವಧಿಯಲ್ಲಿ ಇಲ್ಲಿನ ಉಷ್ಣಾಂಶವು ರಾತ್ರಿಯ ಸಮಯದಲ್ಲಿ 4 ಡಿಗ್ರಿಯವರೆಗೆ ಕುಸಿಯುವ ಸಂಭವವಿರುತ್ತದೆ.