Search
  • Follow NativePlanet
Share
ಮುಖಪುಟ » ಸ್ಥಳಗಳು » ಊಟಿ » ಆಕರ್ಷಣೆಗಳು » ಬೊಟಾನಿಕಲ್ ಗಾರ್ಡನ್ಸ್

ಬೊಟಾನಿಕಲ್ ಗಾರ್ಡನ್ಸ್, ಊಟಿ

7

ಊಟಿಯಲ್ಲಿರುವ ಬೊಟಾನಿಕಲ್ ಗಾರ್ಡನ್ಸ್ ಅಥವಾ ಸರ್ಕಾರಿ ಬೊಟಾನಿಕಲ್ ಗಾರ್ಡನ್ಸ್ ಸುಮಾರು 22 ಹೆಕ್ಟೇರ್ ವಿಸ್ತೀರ್ಣದಲ್ಲಿ ನೆಲೆಗೊಂಡಿದೆ. ಇದನ್ನು ದೊಡ್ಡ ಬೆಟ್ಟ ಶಿಖರದ ಇಳಿಜಾರಿನಲ್ಲಿ ನಿರ್ಮಿಸಲಾಗಿದೆ. ಇದರ ಮೇಲೆ ಹಸಿರು ನೆಲಹಾಸು ಹಾಸಿದಂತೆ ಕಾಣುವ ದಟ್ಟ ಕಾಡು ನೋಡಲು ಮನಮೋಹಕವಾಗಿರುತ್ತದೆ. ಈ ಉದ್ಯಾನವನವನ್ನು ತಮಿಳುನಾಡು ತೋಟಗಾರಿಕಾ ಇಲಾಖೆಯು ನಿರ್ವಹಣೆ ಮಾಡುತ್ತದೆ.

ಈ ಉದ್ಯಾನವನವನ್ನು 1847ರಲ್ಲಿ ಬ್ರಿಟೀಷ್ ವಾಸ್ತು ಶಿಲ್ಪಿಯಾದ ವಿಲಿಯಂ ಗ್ರಾಹಂ ಮ್ಯಾಕ್‍ಲೋವರ್ ಸ್ಥಾಪಿಸಿದನು. ಸ್ವಾತಂತ್ರ್ಯ ಪೂರ್ವದಲ್ಲಿ ಈ ಉದ್ಯಾನವನಕ್ಕೆ ಭೇಟಿಕೊಡಬೇಕಾದರೆ ಸದಸ್ಯತ್ವವನ್ನು ಪಡೆದಿರಬೇಕಾಗಿತ್ತು. ಅಲ್ಲದೆ ಕೇವಲ ಯೂರೋಪಿಯನ್ನರಿಗೆ ಮಾತ್ರ ಇದರೊಳಗೆ ಪ್ರವೇಶಾವಕಾಶವಿತ್ತು. ಅಲ್ಲದೆ ಅವರು ಪ್ರತಿ ತಿಂಗಳಿಗೆ 3 ರೂಪಾಯಿ ಶುಲ್ಕವನ್ನು ಪಾವತಿಸಬೇಕಿತ್ತು.

ಇಲ್ಲಿರುವ ವಿವಿಧ ಜಾತಿಯ ಅಸಂಖ್ಯಾತ ಸಸ್ಯಗಳನ್ನು ನೋಡಲು ಈ ಉದ್ಯಾನವನಕ್ಕೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿಕೊಡುತ್ತಿರುತ್ತಾರೆ. ಇವುಗಳಲ್ಲಿ ಕೆಲವು ಅತಿ ಅಪರೂಪ ಮತ್ತು ದೇಶೀಯವಾದ ಸಸಿಗಳು ಸೇರಿವೆ. ಇಲ್ಲಿ ಗಿಡಮೂಲಿಕೆಗಳು, ಪೊದೆಗಳು, ಮರಗಳು, ಬೋನ್ಸಾಯ್ ವೃಕ್ಷಗಳು ಮತ್ತು ಲತೆಗಳು ಇವೆ. ಈ ಉದ್ಯಾನವನದ ನಡುವೆ ಒಂದು ವೃಕ್ಷ ಕಾಂಡದ ಪಳೆಯುಳಿಕೆಯಿದೆ. ನಂಬಿಕೆಗಳ ಪ್ರಕಾರ ಈ ಪಳೆಯುಳಿಕೆಯು 20 ಮಿಲಿಯನ್ ವರ್ಷ ಹಳೆಯದು ಎಂದು ಹೇಳಲಾಗುತ್ತದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri