Search
  • Follow NativePlanet
Share
ಮುಖಪುಟ » ಸ್ಥಳಗಳು» ಹಳೆ ಗೋವಾ

ಹಳೆ ಗೋವಾ

24

ಹಳೆ ಗೋವಾ ಪ್ರದೇಶವು ಪಣಜಿಯಿಂದ 10 ಕಿ.ಮೀ ದೂರದಲ್ಲಿದೆ. ವಾಸ್ತುಕಲೆ ಮತ್ತು ಐತಿಹಾಸಿಕವಾಗಿ ಶ್ರೀಮಂತವಾಗಿರುವ ಈ ಪ್ರದೇಶ ಪೋರ್ಚುಗೀಸರ ಆಡಳಿತದಲ್ಲಿ ರಾಜಧಾನಿಯಾಗಿ ಮೆರೆದಿತ್ತು. ಸ್ಥಳೀಯವಾಗಿ ವೆಲ್ಹಾ ಗೋವಾ ಎಂದು ಕರೆಯಲ್ಪಡುವ ಈ ಪ್ರದೇಶದ ನಿರ್ಮಾಣವು ಬಿಜಾಪುರದ ಆಡಳಿತದಿಂದ ಮಾಡಲ್ಪಟ್ಟಿತು ತದನಂತರ ಪೋರ್ಚುಗೀಸರ ವಶವಾಯಿತು.ಈಗ ಇಲ್ಲಿ ಅಷ್ಟೊಂದು ಜನಸಂಖ್ಯೆ ಇಲ್ಲದೆ ಹೋದರೂ, ಒಂದಾನೊಂದು ಕಾಲದಲ್ಲಿ ಈ ಪ್ರದೇಶ ಅತಿಯಾದ ಜನಜಂಗುಳಿಯಿಂದ ತುಂಬಿತ್ತು. ಆದರೆ ದುರದೃಷ್ಟವಶಾತ 17 ನೇ ಶತಮಾನದಲ್ಲಿ ಭೀಕರ ಪ್ರಮಾಣದ ಸಾಂಕ್ರಾಮಿಕ ರೋಗಗಳು ಇಲ್ಲಿ ಅಪ್ಪಳಿಸಿದ್ದರಿಂದ ಬಹು ಜನರು ಇಲ್ಲಿಂದ ವಲಸೆ ಹೋಗಬೇಕಾಯಿತು. ಅಂದಿನಿಂದ ಇದಕ್ಕೆ ವ್ಹೆಲಾ ಗೋವಾ ಎಂದು ಕರೆಯಲಾಗುತ್ತಿದ್ದು, ಪಣಜಿಯನ್ನು ನವಾ ಗೋವಾ ಎಂದು ಕರೆಯುತ್ತಾರೆ.

ತನ್ನಲ್ಲಿರುವ ಚರ್ಚಗಳಿಂದ ಹಳೆ ಗೋವಾವು ಪ್ರಸಿದ್ಧವಾಗಿದೆ. 17 ನೇ ಶತಮಾನದಲ್ಲಿ ಪೋರ್ಚುಗೀಸರಿಂದ ನಿರ್ಮಾಣ ಮಾಡಲ್ಪಟ್ಟ ಸಂತ ಫ್ರಾನ್ಸಿಸ್ ಆಫ್ ಅಸ್ಸಿಸಿ ಚರ್ಚನ್ನು ಇಲ್ಲಿ ಕಾಣಬಹುದು. ಈ ಚರ್ಚಿನ ಕೇಂದ್ರ ಭಾಗದಲ್ಲಿ ಸಂತ ಮೈಕೆಲ್ ಅವರ ಪ್ರತಿಮೆಯಿರುವುದನ್ನು ಗಮನಿಸಬಹುದು. ಅಂತರರಾಷ್ಟ್ರೀಯ ಸ್ಥಳವಾದ 'ಸೆಂಟ್ ಪೀಟರ್ಸಬರ್ಗ್'ನಲ್ಲಿ ಇರುವ ಹಾಗೆ ಇಲ್ಲಿಯ ಪ್ರತಿಯೊಂದು ಖಂಬಗಳು ಹಾಗು ಸಂತ ಪೀಟರ್ ಮತ್ತು ಸಂತ ಪೌಲರ ಪ್ರತಿಮೆಗಳು ಗಾಂಭಿರ್ಯತೆಯನ್ನು ಹೊಂದಿರುವುದು ವಿಶೇಷ. ಈ ಪ್ರದೇಶವು ಧಾರ್ಮಿಕವಾಗಿ ಮಹತ್ವವನ್ನು ಪಡೆದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕೇವಲ ಧಾರ್ಮಿಕವಾಗಿ ಮಾತ್ರವೇ ಅಲ್ಲದೆ ಮನರಂಜನಾತ್ಮಕವಾಗಿಯೂ ಈ ಪ್ರದೇಶದಲ್ಲಿ ಹಲವಾರು ಸ್ಥಳಗಳನ್ನು ವಿಕ್ಷೀಸಬಹುದಾಗಿದೆ. ಕಾರಾಂಬೋಲಿಮ ಒಂದು ಮಾನವ ನಿರ್ಮಿತ ಸರೋವರವಾಗಿದ್ದು, ಇದನ್ನು ಸಾವಿರಾರು ಸಂಖ್ಯೆಯಲ್ಲಿ ವಲಸೆ ಬರುವ ಪಕ್ಷಿಗಳ ಪಾಲಿಗೆ ಸ್ವರ್ಗವೆಂದೆ ಹೇಳಲಾಗುತ್ತದೆ. ಕರ್ಮಾಲಿ ರೈಲು ನಿಲ್ದಾಣಕ್ಕೆ ಇದು ಹತ್ತಿರವಾಗಿದ್ದು ಇಲ್ಲಿ ಬಣ್ಣ ಬಣ್ಣದ ಹಲವಾರು ಪ್ರಭೇದದ ಪಕ್ಷಿಗಳನ್ನು ನೋಡಬಹುದು.  ಗೋವಾವನ್ನು 'ಕ್ರೀಶ್ಚ್ಯನೀಕರಣ' ಮಾಡುವ ಉದ್ದೇಶದಿಂದ 16 ನೇ ಶತಮಾನದಲ್ಲಿ ಪೋರ್ಚುಗೀಸ ಆಡಳಿತಾಧಿಕಾರಿಗಳು ಧರ್ಮಬೋಧಕರನ್ನು ನೇಮಿಸಿದರು. ಇದರ ಪರಿಣಾಮವಾಗಿ ಆಗ ಡೈವರ್ ದ್ವೀಪದಲ್ಲಿದ್ದ ಹಲವಾರು ಪ್ರಸಿದ್ಧ ಹಿಂದು ದೇವಾಲಯಗಳು ಇದನ್ನು ತಡೆಯಲಾರದೆ ಹೋದವು. ಇತಿಹಾಸ ಏನೇ ಇರಲಿ, ಆದರೆ ಇಂದಿಗೂ ಕೂಡ ಡೈವರ್ ದ್ವೀಪ ತನ್ನ ಪ್ರಾಕೃತಿಕ ಸೊಬಗಿಗೆ ಹೆಸರುವಾಸಿಯಾಗಿದೆ. ಪಣಜಿಯಿಂದ ಫೆರ್ರಿ ಇಲ್ಲವೆ ಬೋಟ ಮುಖಾಂತರ ಇಲ್ಲಿಗೆ ತಲುಪಬಹುದು. ಇಲ್ಲಿ ಜರುಗುವ 'ಬುಂದೆರಾಮ' ಇಲ್ಲವೆ 'ಪೊಟೇಕರ್' ಜಾತ್ರೆಗಳು ವಿಕ್ಷಿಸಲೇ ಬೇಕಾದಂತಹ ಉತ್ಸವಗಳಾಗಿವೆ.

ಇನ್ನು ಪ್ರಕೃತಿ ಹಾಗು ಚರ್ಚಗಳ ಭೇಟಿ ಸಾಕಾಗಿತ್ತೆಂದರೆ, 'ವೈಸರಾಯ್ ನ ಆರ್ಚ್'ಗೆ ಭೇಟಿ ನೀಡಿ. ಈ ಸ್ಮಾರಕವನ್ನು ವಾಸ್ಕೊ ಡಾ ಗಾಮಾನ ಸ್ಮರಣಾರ್ಥವಾಗಿ ೧೬ ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಆ ಕಾಲದಲ್ಲಿ ಹಳೆಗೋವಾದ ಹೆಬ್ಬಾಗಿಲಾಗಿಯೂ ಇದು ಕಾರ್ಯ ನಿರ್ವಹಿಸಿದೆ.ಇಲ್ಲಿಗೆ ತಲುಪಲು ಕ್ಯಾಬ, ರಿಕ್ಷಾಗಳು ಲಭ್ಯವಿದ್ದು, ಇಷ್ಟವಿದ್ದಲ್ಲಿ ಸ್ವಂತವಾಗಿಯೂ ಕೂಡ ಡ್ರೈವ್ ಮಾಡಬಹುದು!

ಹಳೆ ಗೋವಾ ಪ್ರಸಿದ್ಧವಾಗಿದೆ

ಹಳೆ ಗೋವಾ ಹವಾಮಾನ

ಉತ್ತಮ ಸಮಯ ಹಳೆ ಗೋವಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಹಳೆ ಗೋವಾ

  • ರಸ್ತೆಯ ಮೂಲಕ
    ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri