Search
  • Follow NativePlanet
Share
ಮುಖಪುಟ » ಸ್ಥಳಗಳು» ನುರ್ಪುರ್

ನುರ್ಪುರ್ - ಆಧ್ಯಾತ್ಮಿಕತೆಯನ್ನು ಪ್ರಚೋದಿಸುವ ತಾಣ

8

ನುರ್ಪುರ್ ಒಂದು ಸಣ್ಣ ನಗರ. ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ಈ ನರಗವಿದೆ. ಈ ಪ್ರದೇಶವು ಸಮುದ್ರ ಮಟ್ಟದಿಂದ ಸುಮಾರು 643 ಮೀ. ಎತ್ತರದಲ್ಲಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಗುವುದಕ್ಕಿಂತಲೂ ಮುಂಚೆ ಈ ಪ್ರದೇಶವು ರಜಪೂತರ ಪಟಿಯಾಲಾ ರಾಜ್ಯಕ್ಕೆ ಸೇರಿತ್ತು. ಚಂದ್ರವಂಶಿ ರಜಪೂತರ ತನ್ವರ್ ಮನೆತನವು ಸುಮಾರು 800 ವರ್ಷಗಳ ವರೆಗೆ ಈ ಪ್ರದೇಶವನ್ನು ಆಳಿತ್ತು ಎಂದು ಸಾಕ್ಷ್ಯಾಧಾರಗಳು ಹೇಳುತ್ತವೆ. ಆ ಸಮಯದಲ್ಲಿ ಈ ಪ್ರದೇಶದ ರಾಜಧಾನಿ ಪಠಾಣ್‌ಕೋಟ್‌ ಆಗಿತ್ತು.

ನುರ್ಪುರ್ ಅನ್ನು ಹಿಂದೆ ಧಮೇರಿ ಎಂದು ಕರೆಯಲಾಗುತ್ತಿತ್ತು. ನಂತರ ರಾಣಿ ನೂರ್ ಜಹಾನ್ ಇದನ್ನು ನುರ್ಪುರ್ ಎಂದು ಬದಲಾಯಿಸಿದಳು. ಐತಿಹ್ಯಗಳ ಪ್ರಕಾರ, ರಾಣಿ ನೂರ್ ಜಹಾನ್‌ ಈ ಪ್ರದೇಶವನ್ನು ಭೇಟಿ ಮಾಡಿ, ಇಲ್ಲಿನ ಸೌಂದರ್ಯಕ್ಕೆ ಮಾರುಹೋಗಿದ್ದಳು. ಆಮೇಲೆ ಇಲ್ಲೊಂದು ಅರಮನೆಯನ್ನು ಕಟ್ಟುವ ನಿರ್ಧಾರವನ್ನು ಮಾಡಿದಳು ಎನ್ನಲಾಗುತ್ತದೆ, ರಾಜಾ ಜಗತ್‌ ಸಿಂಗ್‌ ಪಥಾನಿಯಾ ಈ ಪ್ರದೇಶವನ್ನು ಆಗ ಆಳುತ್ತಿದ್ದನು. ಹೀಗಾಗಿ ಮೊಘಲರು ಈ ಪ್ರದೇಶದ ಮೇಲೆ ಹಿಡಿತ ಸಾಧಿಸುವುದನ್ನು ಸಹಿಸುತ್ತಿರಲಿಲ್ಲ. ಹೀಗಾಗಿ ಈ ಪ್ರದೇಶದಲ್ಲಿ ಗಾಯ್ತರ್ ಎಂಬ ಸಾಂಕ್ರಾಮಿಕ ರೋಗವು ವೇಗವಾಗಿ ಹರಡುತ್ತದೆ ಎಂದು ಸುದ್ದಿ ಹಬ್ಬಿಸಿದ. ಈ ಸುದ್ದಿಯನ್ನು ಕೇಳಿದ ರಾಣಿ ನೂರ್ ಜಹಾನ್, ಇಲ್ಲಿ ಅರಮನೆ ಕಟ್ಟುವ ಆಸೆಯನ್ನು ಬದಿಗೊತ್ತಿದಳು. ನಂತರ ರಾಜ ಜಗತ್‌ ಸಿಂಗ್ ಪಥಾನಿಯಾ ಈ ಪ್ರದೇಶದ ಹೆಸರನ್ನು ರಾಣಿ ನೂರ್ ಜಹಾನ್‌ ನೆನಪಿಗೆ,1622 ರಲ್ಲಿ ನುರ್ ಪುರ್ ಎಂದು ಬದಲಿಸಿದ.

ಈ ಪ್ರದೇಶದಲ್ಲಿ ಬೆಳೆಯುವ ಹಣ್ಣುಗಳಲ್ಲಿ ಮಾವು, ಕಿತ್ತಳೆ ಹಾಗು ಏಲಕ್ಕಿ ಮತ್ತು ಆಮ್ಲಾ ಪ್ರಮುಖವಾದದ್ದು. ನುರ್ಪುರದ ಜನರ ಪ್ರಮುಖ ಉದ್ಯೋಗ ಕೋಳಿ ಸಾಕಾಣಿಕೆ. ಇದರ ಹೊರತಾಗಿ ಇಲ್ಲಿ ದೊರೆಯುವ ರೇಷ್ಮೆ ಮತ್ತು ಪಶ್ಮಾನಿಯಾ ಶಾಲ್‌ಗಳೂ ಕೂಡಾ ಪ್ರವಾಸಿಗರಲ್ಲಿ ಜನಪ್ರಿಯ.

ನಾಗನಿ ಮಾತಾ ದೇವಸ್ಥಾನ ಮತ್ತು ಬ್ರಿಜ್ ರಾಜ್‌ ಸ್ವಾಮಿ ದೇವಸ್ಥಾನವು ಇಲ್ಲಿನ ಎರಡು ಪ್ರಮುಖ ದೇವಸ್ಥಾನಗಳು. ಇದರ ಜೊತೆಗೆ ಪ್ರವಾಸಿಗರು ನುರ್ಪುರ ಕೋಟೆಯನ್ನೂ ನೋಡಬಹುದು. ಇದನ್ನು 10 ನೇ ಶತಮಾನದಲ್ಲಿ ಪಥಾನಿಯಾ ಆಡಳಿತದಲ್ಲಿ ನಿರ್ಮಿಸಲಾಗಿತ್ತು. ಕೋಟೆಯ ಬಹುಭಾಗ ಈಗ ನಾಶವಾಗಿದೆ. ಆದರೆ ಪುರಾತತ್ವಶಾಸ್ತ್ರದಲ್ಲಿ ನಂಬಿಕೆಯಿರುವ ಪ್ರವಾಸಿಗರಿಗೆ ಕೋಟೆಯ ವಾಸ್ತುಶಿಲ್ಪ ಇಷ್ಟವಾಗುತ್ತದೆ.

ನುರ್ಪುರಕ್ಕೆ ವಿಮಾನದ ಮೂಲಕ ಭೇಟಿ ಮಾಡುವ ಪ್ರವಾಸಿಗರು ಗಗ್ಗಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಬಹುದು. ಇದು ಕಾಂಗ್ರಾ ಜಿಲ್ಲೆಯಲ್ಲಿದೆ. ಅಮೃತಸರ, ಚಂಡೀಗಢ ಮತ್ತು ಜಮ್ಮುವಿಗೆ ಕಾಂಗ್ರಾ ವಿಮಾನ ನಿಲ್ದಾಣವು ಸಂಪರ್ಕವನ್ನು ಹೊಂದಿದೆ. ನುರ್ಪುರಕ್ಕೆ ಸಮೀಪದ ರೈಲು ನಿಲ್ದಾಣವು ಪಠಾಣ್‌ಕೋಟ್‌ ರೈಲ್ವೆ ನಿಲ್ದಾಣವಾಗಿದ್ದು, ಕಾಂಗ್ರಾದಿಂದ 90 ಕಿ.ಮೀ ದೂರದಲ್ಲಿದೆ. ಇನ್ನು ನುರ್ಪುರಕ್ಕೆ ಬಸ್‌ ಮೂಲಕವೂ ತಲುಪಬಹುದು. ಧರ್ಮಶಾಲಾ, ಪಾಲಂಪುರ, ಪಠಾಣ್‌ಕೋಟ್‌, ಜಮ್ಮು, ಅಮೃತಸರ ಮತ್ತು ಚಂಡೀಗಢದಿಂದ ಬಸ್‌ ಸೌಲಭ್ಯವಿದೆ.

ಇಲ್ಲಿನ ವಾತಾವರಣವು ಚಳಿಗಾಲದ ಹೊರತಾಗಿ ವರ್ಷದ ಇತರ ಎಲ್ಲಾ ಸಮಯದಲ್ಲೂ ಕೂಡಾ ಪ್ರಶಾಂತವಾಗಿಯೇ ಇರುತ್ತದೆ. ಸಪ್ಟೆಂಬರಿನಿಂದ ಜೂನ್‌ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ.

ನುರ್ಪುರ್ ಪ್ರಸಿದ್ಧವಾಗಿದೆ

ನುರ್ಪುರ್ ಹವಾಮಾನ

ಉತ್ತಮ ಸಮಯ ನುರ್ಪುರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ನುರ್ಪುರ್

  • ರಸ್ತೆಯ ಮೂಲಕ
    ನುರ್ಪುರವು ಧರ್ಮಶಾಲಾ, ಪಾಲಂಪುರ, ಪಠಾಣ್‌ಕೋಟ್‌, ಜಮ್ಮು ಮತ್ತು ಚಂಡೀಗಢಕ್ಕೆ ಬಸ್‌ ಸೇವೆಯನ್ನು ಹೊಂದಿದೆ. ಇಲ್ಲಿಂದ ಸರ್ಕಾರಿ ಮತ್ತು ಖಾಸಗಿ ಬಸ್‌ ಸೇವೆಗಳನ್ನು ಪಡೆದು ಪ್ರಯಾಣಿಸಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ನುರ್ಪುರಕ್ಕೆ ಸಮೀಪದ ಬ್ರಾಡ್‌ ಗೇಜ್‌ ರೈಲು ನಿಲ್ದಾಣವು ಪಠಾಣ್‌ಕೋಟ್‌ನಲ್ಲಿದ್ದು, 24 ಕಿ.ಮೀ ದೂರದಲ್ಲಿದೆ. ನುರ್ಪುರಕ್ಕೆ ಪ್ರಯಾಣಿಸುವ ಪ್ರವಾಸಿಗರು ಟ್ಯಾಕ್ಸಿ ಮತ್ತು ಕ್ಯಾಬ್‌ಗಳನ್ನು ಪಡೆದು ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಗಗ್ಗಲ್‌ ವಿಮಾನ ನಿಲ್ದಾಣವು ನುರ್ಪುರದಿಂದ 51 ಕಿ.ಮೀ ದೂರದಲ್ಲಿದೆ. ಇತರೆ ಪ್ರಮುಖ ವಿಮಾನ ನಿಲ್ದಾಣವೆಂದರೆ ಚಂಡೀಗಢ. ಇದು 225 ಕಿ.ಮೀ ದೂರದಲ್ಲಿದೆ. ಅಮೃತಸರ ವಿಮಾನ ನಿಲ್ದಾಣವು 208 ಕಿ.ಮೀ ದೂರದಲ್ಲಿದ್ದರೆ, ಜಮ್ಮು ವಿಮಾನ ನಿಲ್ದಾಣವು 200 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ಟ್ಯಾಕ್ಸಿಗಳನ್ನು ಮತ್ತು ಕ್ಯಾಬ್‌ಗಳನ್ನು ಬಾಡಿಗೆಗೆ ಪಡೆದು ನುರ್ಪುರ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun