Search
  • Follow NativePlanet
Share
ಮುಖಪುಟ » ಸ್ಥಳಗಳು » ನುಬ್ರಾ ಕಣಿವೆ » ಆಕರ್ಷಣೆಗಳು » ದಿಸ್ಕಿತ್ ಆಶ್ರಮ

ದಿಸ್ಕಿತ್ ಆಶ್ರಮ, ನುಬ್ರಾ ಕಣಿವೆ

7

ದಿಸ್ಕಿತ್ ಆಶ್ರಮ 350 ವರ್ಷಗಳಿಗೂ ಹಳೆಯದು. ಸಮುದ್ರ ಮಟ್ಟದಿಂದ 10310 ಅಡಿ ಎತ್ತರದಲ್ಲಿದೆ ದಿಸ್ಕಿತ್ ಆಶ್ರಮ. ನುಬ್ರಾ ಕಣಿವೆಯ ಆಡಳಿತ ಕೇಂದ್ರ ದಿಸ್ಕಿತ್ ಆಗಿದ್ದು ಹಲವಾರು ಸರ್ಕಾರಿ ಕಚೇರಿಗಳು ಇಲ್ಲಿವೆ. ದಿಸ್ಕಿತ್ ಆಶ್ರಮ ಇಲ್ಲಿನ ಪ್ರಮುಖ ಆಕರ್ಷಣೆ. ನುಬ್ರಾ ಕಣಿವೆಯಲ್ಲಿರುವ ಅತ್ಯಂತ ಹಳೆಯ ಮತ್ತು ದೊಡ್ಡ ಬೌದ್ದ ಆಶ್ರಮವಿದು.

14 ನೇ ಶತಮಾನದಲ್ಲಿ ತ್ಸೊಂಗ್ ಖಾಪಾ ಮತ್ತು ಚಂಗೆಝಮ್ ತ್ಸೆರಬ್ ಜಂಗಪೋ ಅನುಯಾಯಿಗಳು ದಿಸ್ಕಿತ್ ಆಶ್ರಮವನ್ನು ಕಟ್ಟಿದರು. ಈ ಆಶ್ರಮ ಟಿಬೇಟಿಯನ್ ಸಂಸ್ಕೃತಿ ಮತ್ತು ಟಿಬೇಟಿಯನ್ ಶೈಲಿಯ ವಾಸ್ತುವನ್ನು ಪ್ರತಿಬಿಂಬಿಸುತ್ತದೆ. ಆಶ್ರಮದ ಮಧ್ಯಬಾಗದಲ್ಲಿರುವ ಗೋಡೆಯ ಚಿತ್ರ ಟಿಬೇಟಿನ ತಶಿಲುಂಪೋ ಗೊಂಪವನ್ನು ಪ್ರದರ್ಶಿಸುತ್ತದೆ. ಕಂಗ್ಯುಲಂಗ್ ಮತ್ತು ತ್ಸಂಗ್ಯುಲಂಗ್ ಎಂಬೆರಡು ಮಂದಿರಗಳು ಆಶ್ರಮದೊಳಗಿವೆ. ಇಲ್ಲಿ ಹಲವಾರು ಟಿಬೇಟಿಯನ್ ಮತ್ತು ಮಂಗೋಲಿಯನ್ ಅಕ್ಷರಗಳನ್ನು ಕಾಣಬಹುದಾಗಿದೆ.

ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಬಂದ 100 ಕ್ಕೂ ಹೆಚ್ಚು ಬೌದ್ದ ಭಿಕ್ಷುಗಳು ಇಲ್ಲಿದ್ದಾರೆ. ಸ್ಕೇಪ್ ಗೋಟ್ ಫೇಸ್ಟಿವಲ್ ಅಥವಾ ಡೆಸ್ಮೋಚೆ ಅಥವಾ ಡೊಸ್ಮೋಚೆ ಹಬ್ಬ ಫೇಬ್ರವರಿಯಲ್ಲಿ ಜರುಗುತ್ತದೆ. ಲಾಮಾಗಳು ನಡೆಸುವ ಮಾಸ್ಕ್ ಡ್ಯಾನ್ಸ್, ಕೆಟ್ಟದ್ದರ ಮೇಲೆ ಒಳ್ಳೆಯದರ ಗೆಲುವನ್ನು ಪ್ರತಿಬಿಂಬಿಸುತ್ತದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri