ನೊಯ್ಡಾದ ಸೆಕ್ಟರ್ 18ರಲ್ಲಿರುವ ವರ್ಲ್ಡ್ಸ್ ಆಫ್ ವಂಡರ್ ಅಥವಾ ವೊವ್ ಏಶ್ಯಾದ ಅತೀ ದೊಡ್ಡ ಅಮ್ಯೂಸ್ಮೆಂಟ್ ಪಾರ್ಕ್ ಗಳಲ್ಲಿ ಒಂದಾಗಿದೆ. ಈ ಪಾರ್ಕ್ ನ್ನು ಯುನಿಟೆಕ್ ಲಿಮಿಟೆಡ್ ಮತ್ತು ಇಂಟರ್ನ್ಯಾಶನಲ್ ರಿಕ್ರಿಯೇಶನ್ ಪಾರ್ಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ. ಎಲ್ಲಾ ವಯೋಮಾನದ ಜನರಿಗೆ ಇಲ್ಲಿ ಮನೋರಂಜನಾ ವ್ಯವಸ್ಥೆ ಮಾಡಲಾಗಿದೆ.
ಪಾರ್ಕ್ ಅನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಒಂದು ವಯಸ್ಕರಿಗಾಗಿ, ಇದನ್ನು ರೋಡ್ ಷೋ ಎಂದು ಕರೆಯಲಾಗುತ್ತದೆ. ಮತ್ತೊಂದು ಕುಟುಂಬ ಹಾಗೂ ಮಕ್ಕಳಿಗಾಗಿ. ಇದನ್ನು ಫೀಸ್ಟ್ ಎನ್ನಲಾಗುತ್ತದೆ. ರೋಡ್ ಷೋ ವಿಭಾಗದಲ್ಲಿ ಸಂಗೀತ, ಸವಾರಿ ಮತ್ತು ಮನೋರಂಜನೆಯಿದೆ. ಪ್ರವಾಸಿಗರು ಸವಾರಿಯಲ್ಲಿ ಅತ್ಯಂತ ಎತ್ತರಕ್ಕೆ ಸಾಗುತ್ತಿರುವಂತೆ ಉಸಿರುಬಿಗಿಹಿಡಿದುಕೊಳ್ಳಬೇಕಾದ ವಾತಾವರಣ ನಿರ್ಮಾಣವಾಗುತ್ತದೆ.
ಫೀಸ್ಟ್ ವಿಭಾಗ ಸುಮಾರು 16187 ಚದರ ಅಡಿಯನ್ನು ವ್ಯಾಪಿಸಿದೆ ಮತ್ತು ಇದರಲ್ಲಿ 11 ಸವಾರಿಗಳಿವೆ. ಪ್ರವಾಸಿಗರಿಗಾಗಿ ವೊವ್ ನಲ್ಲಿ ವಿಭಿನ್ನ ಶೈಲಿಯ ಆಹಾರಗಳು, ನೃತ್ಯ ಮತ್ತು ಆಟಗಳಿವೆ.