ನಿಲಂಬೂರ್ ಪಟ್ಟಣದಿಂದ 2 ಕಿ.ಮೀ ದೂರದಲ್ಲಿ ನೆಲೆಸಿರುವ ಕೊನೊಲ್ಲಿ ಹಳೆಯ ಹಾಗೂ ಜಗತ್ತಿನ ಮೊದಲ ತೇಗದ ಪ್ಲಾಂಟೇಷನ್ ಎಂದು ಮೆಚ್ಚುಗೆಗೆ ಪಾತ್ರವಾಗಿದೆ. ಇದು ವಿಶಾಲವಾದ ಪ್ರದೇಶವನ್ನು ಹೊಂದಿದೆ. ವಸಾಹತು ಕಾಲದಲ್ಲಿ ಮಲಬಾರ್ ಜಿಲ್ಲಾ ಕಚೇರಿಯಲ್ಲಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ ಹೆಚ್.ವಿ.ಕೊನೊಲ್ಲಿಯ ಹೆಸರನ್ನು ಇದಕ್ಕೆ ಇಡಲಾಗಿದೆ. ಹತ್ತೊಂಬತ್ತನೆಯ ಶತಮಾನದಲ್ಲಿ ಈ ಉದ್ಯನವನವು ಶ್ರೀ ಹೆಸರಿನಲ್ಲಿ ಆರಂಭವಾಯಿತು. ನಂತರ ಇದು ಕೊನೊಲ್ಲಿ ಎಂದೆ ಹೆಸರುವಾಸಿಯಾಯಿತು. ಎರಡನೇ ವಿಶ್ವ ಸಮರದ ಸಂದರ್ಭದಲ್ಲಿ ಗ್ರೇಟ್ ಬ್ರಿಟನ್ ಗೆ ಮರದ ಅಗತ್ಯ ಪೂರೈಕೆಳನ್ನು ಇಲ್ಲಿಂದ ರಪ್ತು ಮಾಡಲಾಗುತ್ತಿತ್ತು. ಇಂದು ಕೊನೊಲ್ಲಿ ವಡಾಪುರಮ್ ಎಂಬ ಹೆಸರಿನ ಸ್ಥಳದಲ್ಲಿದೆ. ಹಾಗೂ ಸರ್ಕಾರದ ಟಿಂಬರ್ ಡಿಪೋ ಇದರ ಹತ್ತಿರವೇ ನೆಲೆಸಿದೆ. ಚಾಲಿಯಾರ್ ನದಿಯ ಮೂಲಕ ದೋಣಿಯಲ್ಲಿ ತಲುಪಬಹುದು.