ಕೇರಳದ ನಾಲ್ಕು ಅರಣ್ಯ ನರ್ಸರಿಗಳಲ್ಲಿ ಕೇಂದ್ರ ಅರಣ್ಯ ನರ್ಸರಿ ಕೂಡ ಒಂದು, ಇದನ್ನು 1997 ರಲ್ಲಿ ಸ್ಥಾಪಿಸಲಾಗಿದ್ದು , ಅಕೇಶಿಯ , ನೀಲಗಿರಿ, ಇನ್ನಿತರ ಸಸಿಗಳ ಗುಣಮಟ್ಟದ ಮೊಳಕೆಯನ್ನು ಉತ್ಪಾದಿಸುತ್ತಿದೆ. ಕೇರಳ ಅರಣ್ಯ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದ್ದು, ನಿಲಂಬೂರ್ ಪಟ್ಟಣದ ಸಮೀಪದ ವಲ್ಲುವಸ್ಸೆರಿ ಎಂಬಲ್ಲಿದೆ. ಇಲ್ಲಿ ಅನೇಕ ಜಾತಿಯ ಸಸ್ಯಗಳ ಮೊಳಕೆಯನ್ನು ಉತ್ಪಾದಿಸುವುದರ ಜೊತೆಗೆ ಕಸಿ ಕಟ್ಟಿ ಸಸಿಗಳನ್ನು ಬೆಳೆಸುತ್ತಾರೆ, ಇದಕ್ಕೆ ಬೇಕಾದ ತರಬೇತಿಗಳನ್ನು ಅರಣ್ಯ ಅಧಿಕಾರಿಗಳು ನೀಡುತ್ತಾರೆ. ಸಸ್ಯ ಜೀವನ ಮತ್ತು ತೋಟಗಾರಿಕೆಯಲ್ಲಿ ಆಸಕ್ತಿ ಇರುವವರಿಗೆ ಇದು ಮಹತ್ವಪೂರ್ಣದ್ದಾಗಿದೆ.