ಪ್ರವಾಸಿಗರು ನೆರ್ಸಗೆ ಹೋದಾಗ ತಲವೇಡಿ ಗ್ರಾಮಕ್ಕೆ ತಪ್ಪದೆ ಭೇಟಿಕೊಡಬೇಕು. ಈ ಗ್ರಾಮವು ತನ್ನ ಕಾಡಿನ ಪ್ರಾಂತ್ಯದಲ್ಲಿ ಹೊಂದಿರುವ ವಿವಿಧ ಜಾತಿಯ ಬಾವಲಿಗಳಿಂದಾಗಿ ಪ್ರಸಿದ್ಧಿಪಡೆದಿದೆ. ಅಂಕಿ ಅಂಶಗಳ ಪ್ರಕಾರ ತಲವೇಡಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಲೊಂಡ ಅರಣ್ಯಪ್ರದೇಶದಲ್ಲಿ ಅಂದಾಜು 40 ಬಗೆಯ ಸಸ್ತನಿಗಳನ್ನು ಗುರುತಿಸಲಾಗಿದೆ. ಈ ಪ್ರಾಂತ್ಯಕ್ಕೆ ಸಮೀಪದ ಬರಪೆಡಿ ಗುಹೆಯಲ್ಲಿ ಸುಮಾರು 200 ಬಗೆಯ ಬಾವಲಿಗಳನ್ನು (ಬಹುತೇಕ ಬಾವಲಿಗಳು ಬಾಲರಹಿತವಾದವು) ನೋಡಬಹುದಾಗಿದೆ.