ಬಾಬಾ ಬಾಲ್ರಜ್ ದೇವಾಲಯ ಬಾಲಚೌರ್ ಅನ್ನು 16ನೇಯ ಶತಮಾನದಲ್ಲಿ ಇಲ್ಲಿಗೆ ಭೇಟಿ ನೀಡಿ ತಪಸ್ಸನ್ನು ಕೈಗೊಂಡ ಪ್ರಸಿದ್ಧ ಸಂತ ಬಾಬಾ ರಾಜ್ ದೇವ್ರವರ ನೆನಪಿಗಾಗಿ ನಿರ್ಮಿಸಲಾಗಿದೆ. ಈ ಸಂತ ನಿಧನ ಹೊಂದಿದ ನಂತರ ಅಂದರೆ 1596ರಲ್ಲಿ ಅವರ ಮಗ ಈ ದೇವಾಲಯವನ್ನು ನಿರ್ಮಿಸಿದನು. ಇದಕ್ಕಿಂತ ಮೊದಲು ಅಂದರೆ 1534ರಲ್ಲಿ ಶೇರ್ ಷಾ ಸೂರಿಯು ಹುಮಾಯೂನನ ಮೇಲೆ ಯುದ್ಧಕ್ಕೆ ಹೋಗುವ ಮೊದಲು ಇಲ್ಲಿಗೆ ಆಗಮಿಸಿ ಬಾಬಾರವರ ಆಶೀರ್ವಾದವನ್ನು ಪಡೆದನಂತೆ. ದೀಪಾವಳಿಯ ಮರುದಿನ ಇಲ್ಲಿ ನಡೆಯುವ ಜಾತ್ರೆಯಲ್ಲಿ ಕುಸ್ತಿ ಪಂದ್ಯಗಳನ್ನು ನಡೆಸಲಾಗುವುದು. ನವಾನಶಹರದಿಂದ 18.7 ಕಿ.ಮೀ ದೂರದಲ್ಲಿರುವ ಬಾಲಾಚೌರ್ ಎಂಬ ಗ್ರಾಮದಲ್ಲಿ ಈ ದೇವಾಲಯ ನೆಲೆಗೊಂಡಿದೆ.