ಒರಾಂಗ್ ರಾಷ್ಟ್ರೀಯ ಉದ್ಯಾನ ದಾರಂಗ್ ಮತ್ತು ಸೊನಿತಪುರ್ ಜಿಲ್ಲೆಗಳಲ್ಲಿ ಸುಮಾರು 78 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಆವರಿಸಿಕೊಂಡಿದೆ. ಒರಾಂಗ್ ರಾಷ್ಟ್ರೀಯ ಉದ್ಯಾನವು ಕಾಜಿರಂಗಾ ಉದ್ಯಾನಕ್ಕೆ ಸಮಾನವಾಗಿದೆ ಮತ್ತು ಇದನ್ನು ಕಿರು ಕಾಜಿರಂಗಾ ಎಂದು ಕರೆಯಲಾಗುತ್ತದೆ. ಎರಡೂ ಉದ್ಯಾನಗಳಲ್ಲಿ ಜವುಗು ಪ್ರದೇಶ, ತೊರೆಗಳು ಮತ್ತು ಹುಲ್ಲುಗಾವಲನ್ನು ಒಳಗೊಂಡಿರುವ ಸಮಾನವಾದ ಭೂಮಿಯನ್ನು ಹೊಂದಿದೆ. ಒರಾಂಗ್ ರಾಷ್ಟ್ರೀಯ ಉದ್ಯಾನದಲ್ಲಿ ಭಾರತದ ಶ್ರೇಷ್ಠ ಒಂದು ಕೊಂಬಿನ ಖಡ್ಗಮೃಗಗಳನ್ನು ಕಾಣಬಹುದಾಗಿದೆ.
ಒಂದು ಜಾತಿಯ ಬಿಳಿ ಕೊಕ್ಕರೆ, ಸಿಪಾಯಿ ಕೊಕ್ಕರೆ, ಹೆಣ್ಣುಬಾತು, ಮಲ್ಲಾರ್ಡ್ ಬಾತು, ಮಿಂಚುಳ್ಳಿ ಮತ್ತು ಮರಕುಟಿಗ ಪಕ್ಷಿಯಂತಹ ಹಲವಾರು ವಲಸೆ ಪಕ್ಷಿಗಳನ್ನು ಒರಾಂಗ್ ರಾಷ್ಟ್ರೀಯ ಉದ್ಯಾನದಲ್ಲಿ ಕಾಣಬಹುದು. ರಾಯಲ್ ಬಂಗಾಳ ಹುಲಿ, ಚಿರತೆಗಳು, ಇರುವೆ ತಿನ್ನುವ ಪ್ರಾಣಿ, ಸಿವೆಟ್ಸ್, ಕುಬ್ಜ ಹಂದಿಗಳು ಈ ಉದ್ಯಾನದಲ್ಲಿ ಕಾಣಸಿಗುತ್ತದೆ.
ಅಕ್ಟೋಬರ್ ನಿಂದ ಮಾರ್ಚ್ ತಿಂಗಳ ಮಧ್ಯೆ ಒರಾಂಗ ಉದ್ಯಾನಕ್ಕೆ ಭೇಟಿ ನೀಡಲು ಯೋಗ್ಯ ಸಮಯ. 56 ಕಿ.ಮೀ. ದೂರದಲ್ಲಿರುವ ತೆಜಪುರ್ ರಾಷ್ಟ್ರೀಯ ಉದ್ಯಾನಕ್ಕೆ ತುಂಬಾ ಹತ್ತಿರದ ನಗರ. ರಾಷ್ಟ್ರೀಯ ಉದ್ಯಾನದಿಂದ ಗುವಾಹಟಿ 135 ಕಿ.ಮೀ. ದೂರದಲ್ಲಿದೆ.