Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಶಿಕ್ » ಹವಾಮಾನ

ನಾಶಿಕ್ ಹವಾಮಾನ

ಚಳಿಗಾಲ ಮತ್ತು ಮಳೆಗಾಲಗಳೆರಡೂ ಕೂಡಾ ನಾಶಿಕ್‌ ಭೇಟಿಗೆ ಉತ್ತಮವಾದ ಕಾಲ.

ಬೇಸಿಗೆಗಾಲ

ಮಾರ್ಚ್‌ನಿಂದ ಮೇ ತನಕದ ಅವಧಿ ಬೇಸಿಗೆಕಾಲವಾಗಿರುತ್ತದೆ. ಈ ಅವಧಿಯಲ್ಲಿ ಉಷ್ಣಾಂಶವು ಸುಮಾರು 42 ಡಿಗ್ರಿ ಸೆಲ್ಷಿಯಸ್‌ ತನಕ ಸಾಗುತ್ತದೆ. ವರ್ಷದ ಈ ಸಮಯದಲ್ಲಿ ಪ್ರವಾಸಿಗರು ನಾಶಿಕ್‌ಗೆ ಭೇಟಿ ಕೊಡುವುದನ್ನು ತಪ್ಪಿಸಿಕೊಳ್ಳಬಹುದು. ಯಾಕೆಂದರೆ ಈ ಅವಧಿಯಲ್ಲಿ ಉಷ್ಣಾಂಶವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಏಪ್ರಿಲ್‌ ಮತ್ತು ಮೇ ತಿಂಗಳು ವಿಶೇಷವಾಗಿ ಬಿಸಿಯಾಗಿರುತ್ತದೆ.

ಮಳೆಗಾಲ

ಜೂನ್‌ನಿಂದ ಸಪ್ಟೆಂಬರಿನ ಅವಧಿಯು ಮಳೆಗಾಲವಾಗಿರುತ್ತದೆ. ಮಧ್ಯಮ ಮಳೆ ಈ ಅವಧಿಯಲ್ಲಿ ಬೀಳುತ್ತದೆ. ಬಿಸಿಲಿನ ರಭಸವನ್ನು ಕುಗ್ಗಿಸಲು ಈ ಪ್ರಮಾಣದ ಮಳೆ ಸಹಕಾರಿಯಾಗುತ್ತದೆ. ಈ ಅವಧಿ ನಾಶಿಕ್‌ಗೆ ಭೇಟಿ ನೀಡಲು ಸೂಕ್ತ ಸಮಯ ಎನ್ನಲಾಗಿದೆ.

ಚಳಿಗಾಲ

ಚಳಿಗಾಲವು ಡಿಸೆಂಬರಿನಿಂದ ಫೆಬ್ರುವರಿಯ ತನಕ ಇರುತ್ತದೆ. ಈ ಅವಧಿಯಲ್ಲಿ ಇಲ್ಲಿನ ವಾತಾವರಣ ಉತ್ತಮವಾಗಿರುತ್ತದೆ. ವಾತಾವರಣವು ತಂಪಾಗಿರುತ್ತದೆ. ಈ ಸಂದರ್ಭದಲ್ಲಿ ಇಲ್ಲಿನ ವಾತಾವರಣದಲ್ಲಿ ತಾಪಮಾನವು ಗರಿಷ್ಟ  32°C ನಿಂದ  ಕನಿಷ್ಠ  8°C ಇರುತ್ತದೆ. ಅಕ್ಟೋಬರಿನಿಂದ ಮಾರ್ಚ್‌ ಅವಧಿಯಲ್ಲಿ ನಾಶಿಕ್‌ಗೆ ಭೇಟಿ ನೀಡುವುದು ಹೆಚ್ಚು ಸೂಕ್ತವಾದ ಸಮಯ.