ನಾಶಿಕ್ನಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಮುಕ್ತಿಧಾಮ ದೇವಸ್ಥಾನವು ಜನಪ್ರಿಯವಾಗಿದೆ. ಶುದ್ಧ ಬಿಳಿ ಬಣ್ಣದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಇದನ್ನು ಶ್ರಿ ಜಯರಾಮ ಭಾಯ್ ಬೈಟ್ಕೋ ನಿರ್ಮಿಸಿದ್ದಾರೆ.
ಈ ಪವಿತ್ರ ದೇವಸ್ಥಾನದ ವಾಸ್ತುಶಿಲ್ಪವು ವಿಭಿನ್ನ ಮತ್ತು ಸಾಂಪ್ರದಾಯಿಕವಾಗಿದೆ. ಇಲ್ಲಿನ ಗೋಡೆಗಳ ಮೇಲೆ ಭಗವದ್ಗೀತೆಯ 18 ಅಧ್ಯಾಯಗಳನ್ನು ಕೆತ್ತಲಾಗಿದೆ. 12 ಜ್ಯೋತಿರ್ಲಿಂಗಗಳ ಸ್ಪಷ್ಟ ನಕಲನ್ನು ಇಲ್ಲಿ ಮಾಡಲಾಗಿದೆ.