ಹಿಮಾಚಲ ಪ್ರದೇಶದ ಥಾನೇದಾರ್ ನ ಸಮೀಪದಲ್ಲೇ ಇರುವ ನರಕಂದಾ ಪಟ್ಟಣದ ಸ್ಟ್ರೋಕ್ ಫಾರ್ಮ್ ಪ್ರವಾಸಿಗರ ಪ್ರಮುಖ ತಾಣವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ರುಚಿಕರವಾದ ಸೇಬು ಹಣ್ಣಿನ ಫಾರ್ಮ್ ಇಲ್ಲಿದೆ. ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿರುವ ಸೇಬು ಹಣ್ಣಿನ ತೋಟ ಪ್ರವಾಸಿಗರಿಗೆ ತಾಜಾ ಹಾಗೂ ಮೋಹಕ ವಾತಾವರಣವನ್ನು ಸೃಷ್ಟಿಸುತ್ತದೆ.1904 ರಲ್ಲಿ ಭಾರತದ ತತ್ವಶಾಸ್ತ್ರವನ್ನು ಮೆಚ್ಚಿ ಅಧ್ಯಾಯನ ಮಾಡಲು ಬಂದ ಅಮೆರಿಕದ ಸ್ಯಾಮುವೆಲ್ ಸ್ಟ್ರೋಕ್ ಈ ಸೇಬು ಹಣ್ಣಿನ ತೋಟವನ್ನು ಆರಂಭಿಸಿದರು.
ಸೇಬಿನ ತೋಟದಲ್ಲಿ ಗಿಡಗಳೂ ಹೂ ಬಿಡುವ ಕಾಲ ಅಂದರೆ ಏಪ್ರಿಲ್ ತಿಂಗಳಿನಲ್ಲಿ ಈ ಪ್ರದೇಶವೆಲ್ಲಾ ಬಿಳಿ ಬಣ್ಣದ ಸೇಬುವಿನ ಹೂವಿನಿಂದಾಗಿ ಶ್ವೇತ ಬಣ್ಣದ ಕಣಿವೆಯಾಗಿ ಮಾರ್ಪಡುತ್ತದೆ. ಜೂನ್ ನಿಂದ ಸೆಪ್ಟೆಂಬರ್ ವರೆಗೆ ಹಣ್ಣು ಕೊಯ್ಯುವ ಕಾಲ. ಆ ಸಮಯವೂ ಕೂಡ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.