ಯಾತ್ರಾರ್ಥಿಗಳು ನಂಜನಗೂಡಿಗೆ ಹೋದಾಗ ಅಲ್ಲಿನ ಪುರಾತನ ಸೇತುವೆಯನ್ನು ನೋಡಲು ಹೋಗಬಹುದು. ಇದು 1735ರಲ್ಲಿ ನಿರ್ಮಾಣಗೊಂಡಿದ್ದು ಅತ್ಯಂತ ಹಳೆಯ ಸೇತುವೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ, ಈ ಸೇತುವೆಯ ಮತ್ತೊಂದು ವೈಶಿಷ್ಟ್ಯವೆಂದರೆ ಇದರ ಮೇಲೆ ರೈಲು ಮತ್ತು ಇತರ ವಾಹನಗಳು ಒಟ್ಟಿಗೆ ಓಡಾಡುವುದನ್ನು ಕಾಣಬಹುದು. ಭಾರತ ಸರ್ಕಾರ ಇತ್ತೀಚೆಗೆ ಈ ವಿಶೇಷ ಸೇತುವೆಯನ್ನು ಪಾರಂಪರಿಕ ಸ್ಮಾರಕವೆಂದು ಘೋಷಿಸಿದೆ.