ಜೌರಂಗಜೇಬನ ಕಾಲದ ಮುಘಲರ ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿದ್ದ ಸರ್ಫರಾಝ್ ಖಾನ್ ಗೌರವಾರ್ಥ ಈ ಮಸೀದಿಯನ್ನು ಸುಮಾರು 330 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಇಲ್ಲಿನ ಬಿಲೋಲಿ ಟೌನ್ ಶಿಪ್ ನಲ್ಲಿ ನಿರ್ಮಿಸಲಾಗಿರುವ ಈ ಮಸೀದಿ ಉತ್ತಮವಾದ ವಾಸ್ತುಶಿಲ್ಪ ಕಲೆಯಿಂದ ಕೂಡಿದೆ. 60ರ ದಶಕದಲ್ಲಿ ಸಂಭವಿಸಿದ ಗುಡುಗು ಸಿಡಿಲಿನಿಂದಾಗಿ ಇದರ ದಕ್ಷಿಣ ಭಾಗವು ಸ್ವಲ್ಪ ಮಟ್ಟಿಗೆ ಹಾನಿಗೊಳಗಾದರೂ ನಂತರ ಅದನ್ನು ದುರಸ್ತಿ ಮಾಡಲಾಗಿದೆ.