Search
  • Follow NativePlanet
Share
ಮುಖಪುಟ » ಸ್ಥಳಗಳು» ನಂ ದಫಾ ರಾಷ್ಟ್ರೀಯ ಉದ್ಯಾನ

ನಂ ದಫ ರಾಷ್ಟ್ರೀಯ ಉದ್ಯಾನವನ- ಈಶಾನ್ಯ ರಾಜ್ಯಗಳಲ್ಲಿನ ವನ್ಯಜೀವಿಗಳನ್ನು ನೋಡಬನ್ನಿ

40

ನಂ ದಫ ರಾಷ್ಟ್ರೀಯ ಉದ್ಯಾನವನವು ಅರುಣಾಚಲಪ್ರದೇಶದ ಮುಖ್ಯ ಪ್ರವಾಸಿ ಆಕರ್ಷಣೆಗಳಲ್ಲೊಂದು. ಪೂರ್ವ ಹಿಮಾಲಯದ ಭಾಗಗಳು ಅಪಾರ ಜೀವವೈವಿಧ್ಯವನ್ನು ಹೊಂದಿದ್ದು ಇದರಲ್ಲಿ ನಂದಫವು ಅತಿ ದೊಡ್ಡ ರಕ್ಷಿತ ಪ್ರದೇಶ. ಇದು ದೇಶದಲ್ಲಿನ ಅತಿದೊಡ್ಡ ರಾಷ್ಟ್ರೀಯ ಉದ್ಯಾನವನಗಳಲ್ಲೊಂದು. ಇದು ಚಂಗ್ಲಾಂಗ್ ಜಿಲ್ಲೆಯಲ್ಲಿದೆ. ತನ್ನ ವನ್ಯಜೀವಿ ವೈವಿಧ್ಯಕ್ಕೆ ಹೆಸರುವಾಸಿಯಾಗಿದ್ದು ರಾಷ್ಟ್ರೀಯ ಉದ್ಯಾನವನವಾಗಿ ಗುರುತಿಸಲ್ಪಟ್ಟಿದೆ.

ಇಲ್ಲಿ ದಟ್ಟ ಅರಣ್ಯಗಳಿವೆ. ದಫಬಂ ಶ್ರೇಣಿಯು ಮಿಶಾಮಿ ಬೆಟ್ಟಗಳ ಭಾಗವಾಗಿದೆ ಮತ್ತು ಪಟ್‌ಕೈ ಶ್ರೇಣಿಯು ನಂದಫವನ್ನು ಸುತ್ತುವರೆದಿದೆ. ಇದು ಮೈಓವಿನಿಂದ ಕೆಲವೇ ಕಿಮೀಗಳ ಅಂತರದಲ್ಲಿದೆ. ನಂಫದ ರಾಷ್ಟ್ರೀಯ ಉದ್ಯಾನವನವು ಭಾರತದ 15 ನೇ ಹುಲಿ ಅಭಯರಾಣ್ಯವಾಗಿದ್ದು 1985 ಚದರ ಅಡಿಗಳಷ್ಟು ವಿಸ್ತಾರವಾಗಿದೆ. ನೊಯಾ-ದಿಹಿಂಗ್ ನದಿಯು ಈ ಅರಣ್ಯಗಳಲ್ಲಿ ಹರಿಯುತ್ತದೆ. ನಂದಫ ನದಿಯು ಈ ಉದ್ಯಾನವನದಲ್ಲಿ ಹರಿಯುವುದರಿಂದ ಈ ಉದ್ಯಾನವನಕ್ಕೆ ಈ ಹೆಸರು ಬಂದಿದೆ.

ವನ್ಯಜೀವಿ ಪ್ರೇಮಿಗಳಿಗೆ ಈ ಉದ್ಯಾನವು ಹೇಳಿಮಾಡಿಸಿದ ಜಾಗ. ಇಲ್ಲಿ ಅಪಾರವಾದ ಸಸ್ಯ ಮತ್ತು ಜೀವ ವೈವಿಧ್ಯವಿದೆ. ಮಿಥುನ್, ಆನೆ, ಕಾಡೆಮ್ಮೆ, ಸಾಂಬಾರ್, ಹಿಮಾಲಯದ ಕಪ್ಪು ಕರಡಿ, ತಕಿನ್, ಕಾಡು ಮೇಕೆ, ಜಿಂಕೆ, ಕೆಂಪು ಪಾಂಡ ಮತ್ತಿತರ ಜೀವಿಗಳನ್ನು ಇಲ್ಲಿ ಕಾಣಬಹುದು. ಇಲ್ಲಿ ಹಲವು ರೀತಿಯ ಚಿಟ್ಟೆಗಳನ್ನು ಕೂಡ ಕಾಣಬಹುದು.

ಹುಲಿ, ಚಿರತೆ, ಹಿಮಚಿರತೆಗಳನ್ನು ಇಲ್ಲಿ ಮಾತ್ರ ಕಾಣಬಹುದು. ಹಿಮಚಿರತೆಗಳು ಇಂದು ಕಂಡುಬರುವ ಅಪರೂಪದ ಜೀವಿಗಳಲ್ಲಿ ಒಂದು. ಬಿಳಿರೆಕ್ಕೆಗಳ ಬಾತುಕೋಳಿ ಕೂಡ ಇಲ್ಲಿನ ಅಪರೂಪದ ಜೀವಿಗಳಲ್ಲಿ ಒಂದು. ಅಸ್ಸಾಮಿಸೆ ಮಕ್ಯಾಕ್ಯು, ಪಿಗ್-ಟೈಲ್ಡ್ ಮಕ್ಯಾಕ್ಯು, ಹೂಲಾಕ್ ಗಿಬ್ಬನ್, ಹಾರ್ನಬಿಲ್ಸ್ ಮತ್ತು ಜಂಗಲ್ ಫೌಲ್‌ಗಳನ್ನು ಇಲ್ಲಿ ನೋಡಬಹುದು. ಇಲ್ಲಿಗೆ ಬರುವ ಸಾಹಸ ಪ್ರಿಯರು ಇಲ್ಲಿನ್ ಹಾವುಗಳ ಬಗ್ಗೆ ಎಚ್ಚರದಿಂದ ಇರಬೇಕಾದದ್ದು ಅಗತ್ಯ.

ಇಲ್ಲಿ ಅಪಾರ ಸಸ್ಯ ವೈವಿಧ್ಯವನ್ನು ಕೂಡ ಕಾಣಬಹುದು. ಇಲ್ಲಿ 150 ವಿವಿಧ ಜಾತಿಯ ಸಸ್ಯಗಳನ್ನು, ಔಷಧೀಯ ಗುಣಗಳುಳ್ಳ ಮಿಶ್ಮಿ ತೀತ ಬಗೆಯ ಸಸ್ಯಗಳನ್ನು ಕೂಡ ಕಾಣಬಹುದು. ಹಲವು ಬಗೆಯ ಬಿದಿರುಗಳು, ದೊಡ್ಡ ಎಲೆಗಳ ಮರಗಳು, ಅಲ್ಪೈನ್ ಕಾಡುಗಳು ಮೊದಲಾದವುಗಳನ್ನು ಇಲ್ಲಿ ಕಾಣಬಹುದು. ಮೊದಲು 425 ವಿವಿಧ ಜಾತಿಯ ಸಸ್ಯಗಳನ್ನು ಇಲ್ಲಿ ಕಾಣಬಹುದಾಗಿತ್ತು.

ಇಲ್ಲಿ ಕೆಲವು ಆದಿವಾಸಿ ಪಂಗಡಗಳದ ಜನರನ್ನು ಕೂಡ ಕಾಣಬಹುದು. ಇವರು ಪೂರ್ವಭಾಗದಲ್ಲಿ ಎಂದರೆ ಮಾಯನ್ಮಾರ್‌ನ ಗಡಿಪ್ರದೇಶದಲ್ಲಿ ವಾಸಿಸುತ್ತಾರೆ. ಚಕ್ಮಾ, ತಂಗ್ಸಾ ಮತ್ತು ಸಿಂಗ್ಫೋ ಪಂಗಡಗಳವರು ಈ ಉದ್ಯಾನವನದ ಸುತ್ತ ಕಂಡುಬರುತ್ತಾರೆ.

ನಂದಫ ರಾಷ್ಟ್ರೀಯ ಉದ್ಯಾನವನ ತಲುಪುವುದು ಹೇಗೆ?

ನಂದಫ ರಾಷ್ಟ್ರೀಯ ಉದ್ಯಾನವನ ಮುಖ್ಯವಾಗಿ ರಸ್ತೆ ಸಂಪರ್ಕ ಹೊಂದಿದೆ. ರೈಲು ಮತ್ತು ವಿಮಾನದ ಮೂಲಕ ಬರಲಿಚ್ಛಿಸುವವರು ಅಸ್ಸಾಂಗೆ ಬಂದು ಅಲ್ಲಿಂದ ಮೈಯೋಗೆ ಪ್ರಯಾಣಿಸಬೇಕು.

ನಂದಫ ರಾಷ್ಟ್ರೀಯ ಉದ್ಯಾನವನದಲ್ಲಿ ಹವೆ

ಅಕ್ಟೋಬರ್‌ನಿಂದ ಏಪ್ರಿಲ್‌ವರೆಗಿನ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡಬಹುದು. ಇದು ಪ್ರವಾಸಕ್ಕೆ ಸೂಕ್ತ ಸಮಯ.

ನಂ ದಫಾ ರಾಷ್ಟ್ರೀಯ ಉದ್ಯಾನ ಪ್ರಸಿದ್ಧವಾಗಿದೆ

ನಂ ದಫಾ ರಾಷ್ಟ್ರೀಯ ಉದ್ಯಾನ ಹವಾಮಾನ

ಉತ್ತಮ ಸಮಯ ನಂ ದಫಾ ರಾಷ್ಟ್ರೀಯ ಉದ್ಯಾನ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ನಂ ದಫಾ ರಾಷ್ಟ್ರೀಯ ಉದ್ಯಾನ

  • ರಸ್ತೆಯ ಮೂಲಕ
    ದಿಬ್ರುಗಡ್ ನಿಂದ ಮಿಯಾವೋಗೆ ತೀನ್ಸುಕಿಯಾ ಮೂಲಕ ಬಸ್ಸುಗಳು ಸಂಚರಿಸುತ್ತವೆ. ಮಿಯಾವೋ ಗೆ ದೆಬನ್ ಕೇವಲ 26 ಕಿ.ಮೀ ಅಂತರದಲ್ಲಿದೆ. ಇಲ್ಲಿಂದಲೆ ಕಾಡು ಪ್ರಾರಂಭಗೊಳ್ಳುತ್ತದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಅಸ್ಸಾಮಿನ ತೀನ್ಸುಕಿಯಾ ರೈಲು ನಿಲ್ದಾಣವು ಈ ರಾಷ್ಟ್ರೀಯ ಉದ್ಯಾನಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣ. ಇದು 141 ಕಿ.ಮೀ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಅಸ್ಸಾಮಿನ ದಿಬ್ರುಗಡ್ ನಲ್ಲಿರುವ ಮೋಹನ್‍ಬರಿ ಇದಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ. ಇದು 182 ಕಿ.ಮೀ ದೂರದಲ್ಲಿ ನೆಲೆಸಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat