Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಮಕ್ಕಲ್ » ಹವಾಮಾನ

ನಾಮಕ್ಕಲ್ ಹವಾಮಾನ

ವರ್ಷದಲ್ಲಿ ನಾಮಕ್ಕಲ್ಲಿಗೆ ಭೇಟಿನೀಡಲು ಮಳೆಗಾಲ ಕಳೆದು ಪ್ರಾರಂಭವಾಗುವ ಅಕ್ಟೋಬರ‍್ನಿಂದ ಮಾರ್ಚ್ ವರೆಗಿನ ಸಮಯ ಬಹಳ ಉತ್ತಮ ಸಮಯ. ಹವಾಮಾನವು ವರ್ಷದ ಈ ಸಮಯದಲ್ಲಿ ಹದವಾಗಿರುತ್ತದೆ. ದಿನದಲ್ಲಿ ಗರಿಷ್ಠ ಉಷ್ಣಾಂಶವು 28 ಡಿಗ್ರಿ ಸೆಲ್ಶಿಯುಸ್ ಇರುತ್ತದೆ. ಈ ಸಮಯದಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಆನಂದಿಸಬಹುದು.

ಬೇಸಿಗೆಗಾಲ

ನಾಮಕಲ್ಲಿನ ವಾತವರಣವು ತಮಿಳುನಾಡಿನ ಉಳಿದ ಪ್ರದೇಶಗಳಿಗೆ ಹೋಲುತ್ತದೆ. ಶುಷ್ಕ ಹಾಗೂ ಉಷ್ಣವಲಯದಂತಿರುತ್ತದೆ. ಏಪ್ರಿಲ್ ನಿಂದ ಜುಲೈ ವರೆಗಿನ ಬೇಸಿಗೆಯು ಅತ್ಯಂತ ಕಠಿಣ ಮತ್ತು ಅಹಿತಕರವಾಗಿರುತ್ತದೆ. ತಾಪಮಾನವು 30 ಡಿಗ್ರಿ ಯಿಂದ 40 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ನಾಮಕ್ಕಲ್ಲಿಗೆ ಈ ಸಮಯದಲ್ಲಿ ಪ್ರಯಾಣ ಮಾಡಿದರೆ ವಿಪರೀತ ದಣಿವಾಗಬಹುದಾದರಿಂದ ಭೇಟಿ ಮಾಡುವುದನ್ನು ತಪ್ಪಿಸಿಕೊಳ್ಳುವುದು ಬಹಳ ಒಳ್ಳೆಯದು.

ಮಳೆಗಾಲ

ನಾಮಕ್ಕಲ್ಲಿನಲ್ಲಿ ಮುಖ್ಯವಾಗಿ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳು ಮಳೆಗಾಲವಾಗಿರುತ್ತದೆ. ಆದರೆ ಮಳೆಯು ಜುಲೈ ತಿಂಗಳಿನಲ್ಲಿಯೇ ಆರಂಭವಾಗಬಹುದು. ಮಳೆಯು ಬೇಸಿಗೆಯ ಬೇಗೆಯ ಶಾಖವನ್ನು ಉಪಶಮನಮಾಡುವುದರಿಂದ ಸ್ವಾಗತಾರ್ಹವಾಗಿರುತ್ತದೆ. ಈ ಪ್ರದೇಶವು ಮಳೆಗಾಲದಲ್ಲಿ ಉತ್ತಮ ಪ್ರಮಾಣದ ಮಳೆಯನ್ನು ಪಡೆಯುತ್ತದೆ.

ಚಳಿಗಾಲ

ಚಳಿಗಾಲವು ತುಂಬಾ ಚಳಿ ಮತ್ತು ಕಠಿಣವಾಗಿರುವುದಿಲ್ಲ. ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಚಳಿಯಿದ್ದು ತಂಪಾಗಿರುತ್ತದೆ. ತಾಪಮಾನವು 18 ಡಿಗ್ರಿ ಸೆಲ್ಶಿಯುಸ್ ಇಂದ 28 ಡಿಗ್ರಿ ಸೆಲ್ಶಿಯುಸ್ ವ್ಯಾಪ್ತಿಯಲ್ಲಿ ಇರುತ್ತದೆ. ಈ ಸಮಯ ನಾಮಕ್ಕಲ್ಲಿಗೆ ಪ್ರಯಾಣ ಮಾಡಲು ಅತ್ಯುತ್ತಮವಾಗಿದ್ದು ಪ್ರಯಾಣವು ಹೆಚ್ಚು ಆರಾಮದಾಯಕ ಮತ್ತು ಅಹ್ಲಾದಕರವಾಗಿರುತ್ತದೆ.