ರಾಮಚಂದ್ರ ನಾಯಕರ್ ಅವರು 16ನೇ ಶತಮಾನದಲ್ಲಿ ನಿರ್ಮಿಸಿದ ನಾಮಕ್ಕಲ್ ದುರ್ಗಂ ಕೋಟೆಯು ನಾಮಗಿರಿ ಬೆಟ್ಟದ ಗರಿಷ್ಠ ಎತ್ತರದಲ್ಲಿದೆ. ಈ ಕೋಟೆಯೊಳಗೆ ಪುರಾತನ ವಿಷ್ಣುದೇವರ ದೇವಸ್ಥಾನದ ಅವಶೇಷಗಳೂ ಇವೆ. ನಾಮಕ್ಕಲ್ ದುರ್ಗಂ ಕೋಟೆಯ ವಿಸ್ತೀರ್ಣ ಒಂದೂವರೆ ಎಕರೆ ವ್ಯಾಪ್ತಿಯಲ್ಲಿದೆ. ನೈರುತ್ಯ ಭಾಗದಲ್ಲಿ ಕೋಟೆಗೆ ಹೋಗಲು ಒಂದು ಕಿರಿದಾದ ಮೆಟ್ಟಾಲುಗಳಸಾಲಿನ ಮಾರ್ಗವಿದೆ.
ನರಸಿಂಹಸ್ವಾಮಿ ಮತ್ತು ರಂಗನಾಥಸ್ವಾಮಿ ಅವರುಗಳ ಬಂಡೆಗಲ್ಲಿನಲ್ಲಿ ಕೆತ್ತಲಾದ ಗುಹಾ ದೇವಸ್ಥಾನಗಳು ನಾಮಗಿರಿ ಬೆಟ್ಟದ ಎರಡೂಬದಿಯಲ್ಲಿ ನೆಲೆಸಿವೆ. ಆ ದೇವರುಗಳ ವಿಗ್ರಹಗಳನ್ನು ಜೀವಂತ ಬಂಡೆಗಳಲ್ಲಿ ಕೆತ್ತಲಾಗಿರುವುದರಿಂದ ಇದುವರೆಗೂ ಕಲ್ಲುಬಂಡೆ ಹಾಗೂ ಬೆಟ್ಟದ ಶಕ್ತಿಯಿಂದ ಇಂದಿಗೂ ಉಳಿದುಗೊಂಡಿವೆ. ಈ ಕಲ್ಲುಗಳಲ್ಲಿ ಎಂಟು ಪವಿತ್ರ ನೀರಿನ ಕುಂಡಗಳಿದ್ದು ಅದರೊಳಗೆ ಹಲವಾರು ಕಮಲ ಪುಷ್ಪಗಳು ಬೆಳೆಯುತ್ತದೆ. ಟಿಪ್ಪೂ ಸುಲ್ತಾನನು ಬ್ರಿಟಿಷರಿಂದ ತಪ್ಪಿಸಿಕೊಳ್ಳಲು ಈ ಕೋಟೆಯಲ್ಲಿ ಕೆಲವು ಕಾಲ ಬಚ್ಚಿಟ್ಟುಕೋಂಡನೆಂಬ ನಂಬಿಕೆಯಿದೆ. ಐತಿಹಾಸಿಕ ಮತ್ತು ವಾಸ್ತುಶಿಲ್ಪಮಹತ್ವದ ಈ ಸ್ಥಳವನ್ನು ಭೇಟಿಮಾಡುವುದು ಒಂದು ಅಮೂಲ್ಯ ಅವಕಾಶ.