ತತ್ತಪಾಣಿಯು ನಲ್ದೇರಾದಿಂದ 30 ಕಿ.ಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 655 ಮೀ ಎತ್ತರದಲ್ಲಿರುವ ಈ ಪ್ರದೇಶವು ಬಿಸಿನೀರಿನ ಬುಗ್ಗೆಯಿಂದಾಗಿ ಜನಪ್ರಿಯವಾಗಿದೆ. ಈ ನೀರಿನಲ್ಲಿ ಒಮ್ಮೆ ಮುಳುಗೆದ್ದರೆ ಸಂಧಿವಾತ ಮತ್ತು ಚರ್ಮರೋಗಗಳು ನಿರ್ಮೂಲನೆಯಾಗುತ್ತವೆ ಎಂಬ ನಂಬಿಕೆಯಿದೆ. ಸಟ್ಲೆಜ್ ನದಿಯ ದಡದಲ್ಲಿರುವ ಈ ಬುಗ್ಗೆಯು ಸುಮಾರು ಒಂದು ಚದರ ಕಿ.ಮೀ ವ್ಯಾಪ್ತಿಯನ್ನು ಆವರಿಸಿಕೊಂಡಿದೆ.
ಸಟ್ಲೆಜ್ ನದಿಯಲ್ಲಿ ಪ್ರವಾಸಿಗರು ಒಮ್ಮೆ ಸ್ನಾನ ಮಾಡಬಹುದು. ಜನವರಿ ಮತ್ತು ಏಪ್ರಿಲ್ ಅವಧಿಯಲ್ಲಿ ಅಪಾರ ಪ್ರಮಾಣದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಈ ಬುಗ್ಗೆಯ ವೈಶಿಷ್ಠ್ಯತೆಯೆಂದರೆ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಒಮ್ಮೆ ಮಾಯವಾಗಿ ಮತ್ತೆ ನವೆಂಬರ್ ಅಥವಾ ಡಿಸೆಂಬರಿನಲ್ಲಿ ಪ್ರತ್ಯಕ್ಷವಾಗುವುದು.