ಟಿಬೇಟಿಯನ್ ಮಾರುಕಟ್ಟೆ ನೈನಿತಾಲ್ ನ ಬಿಡುವಿಲ್ಲದ ವ್ಯಾಪಾರ ಕ್ಷೇತ್ರವಾಗಿದೆ. ಪ್ರವಾಸಿಗರು ಒಂದೇ ಸೂರಿನಡಿ ವಿವಿಧ ವಸ್ತುಗಳನ್ನು ಇಲ್ಲಿ ಕಾಣಬಹುದು. ಶಿರೋವಸ್ತ್ರಗಳು, ಶಾಲುಗಳು, ಉಣ್ಣೆಯ ಹಿಮಾಲಯದ ಚೀಲಗಳು, ಜಂಕ್ ಆಭರಣ ಮತ್ತು ಕೈಗಡಿಯಾರಗಳು ಹೀಗೆ ವಿವಿಧ ವಸ್ತುಗಳನ್ನು ಇಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಕೊಳ್ಳಬಹುದು. ಮೇಲಾಗಿ, ಚೌಕಾಸಿ ಮಾಡುವುದು ಈ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿದೆ.