ದಿ ಮಾಲ್ ರೋಡ್, ನೈನಿತಾಲಿನ ಪ್ರಸಿದ್ಧ ರಸ್ತೆಯ ಹೆಸರು. ಇತ್ತೀಚಿಗಷ್ಟೆ ಇದನ್ನು ಗೋವಿಂದ್ ಬಲ್ಲಭ್ ಪಂಥ್ ಮಾರ್ಗ ಎಂದು ಮರು ಹೆಸರಿಸಲಾಗಿದೆ. ಇಲ್ಲಿ ಅನೇಕ ಅಂಗಡಿಗಳು, ಮಾರುಕಟ್ಟೆಗಳು, ವಿವಿಧ ಬ್ಯಾಂಕುಗಳು ಮತ್ತು ಪ್ರಯಾಣ ಸಂಸ್ಥೆಗಳು ಸುತ್ತಲೂ ಲಭ್ಯವಿವೆ. ಈ ರಸ್ತೆ ಮಲ್ಲಿತಾಲ್ ನಿಂದ ತಲ್ಲಿತಾಲ್ ಅನ್ನು ಸಂಪರ್ಕಿಸುತ್ತದೆ. ಇಲ್ಲಿಯ ಮತ್ತೊಂದು ಪ್ರವಾಸಿ ಆಕರ್ಷಣೆ ಥಂಡೀ ಸಡಕ್, ನೈನಿ ಸರೋವರದ ಇನ್ನೊಂದು ಭಾಗದಲ್ಲಿದೆ.