ಕುದುರೆ ಸವಾರಿ ನೈನಿತಾಲ್ ಪ್ರಮುಖ ಆಕರ್ಷಣೆಯಾಗಿದೆ. ಕುದುರೆಗಳು ಪಟ್ಟಣದಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಲು ಸಾರಿಗೆಯ ಒಂದು ಕ್ರಮವಾಗಿ ಇಲ್ಲಿ ಬಳಸಲಲ್ಪಡುತ್ತವೆ. ಕುದುರೆ ಸವಾರಿ ಕಟ್ಟುನಿಟ್ಟಾಗಿ ಪಟ್ಟಣದ ಒಳಗೆ ನಿಷೇಧಿಸಲಾಗಿದೆ, ಆದಾಗ್ಯೂ, ಪ್ರಯಾಣಿಕರು ಬಾರಾ ಪತ್ಥರ್ ಅನ್ನುವ ತಾಣದಲ್ಲಿ ಈ ಸವಾರಿಯನ್ನು ಆನಂದಿಸಬಹುದು. ಕುದುರೆ ಗೊಬ್ಬರದಿಂದ ಸರೋವರದ ಮತ್ತು ಮಾಲ್/ಮಳಿಗೆಯ ಸೌಂದರ್ಯ ಮಲಿನಗೊಂಡಿರುವ ಹಿನ್ನೆಲೆಯಲ್ಲಿ ಈ ನಿಷೇಧವನ್ನು ನ್ಯಾಯಾಲಯವು ಆದೇಶಿಸಿದೆ. ಪ್ರವಾಸಿಗರು ಸುಂದರ ಪಿಕ್ನಿಕ್ ತಾಣ ಟಿಫನ್ ಟಾಪ್ ತಲುಪಲು ಇಲ್ಲಿರುವ ರಾಮನಗರದಿಂದ ಕುದುರೆಗಳ ಮೂಲಕ ಹೋಗಬಹುದು.