ಹನುಮಾನ್ಗಡಿ, ನೈನಿತಾಲ್ ನಿಂದ 3 ಕಿ. ಮೀ ದೂರದಲ್ಲಿರುವ ಧಾರ್ಮಿಕ ಸ್ಥಳವಾಗಿದೆ. ಹನುಮಾನ ದೇವರಿಗೆ ಮೀಸಲಾದ ಪ್ರಸಿದ್ಧ ದೇವಸ್ಥಾನ ಇದಾಗಿದೆ. ಈ ದೇವಾಲಯವು ಸಮುದ್ರ ಮಟ್ಟದಿಂದ 1951 ಮೀಟರ್ ಎತ್ತರದಲ್ಲಿದೆ. ಈ ದೇವಾಲಯವನ್ನು 1950 ರಲ್ಲಿ ನೀಮ್ ಕರೋಲಿ ಬಾಬಾ ಅವರು ನಿರ್ಮಿಸಿದರು. ಜೊತೆಗೆ, ಬೆಟ್ಟದ ಮತ್ತೊಂದು ಬದಿಯಲ್ಲಿರುವ ಶೀತಲ ದೇವಿ ದೇವಾಲಯ ಮತ್ತು ಲೀಲಾ ಸಹ್ ಬಾಪು ಆಶ್ರಮ ಅತ್ಯಂತ ಆಕರ್ಷಣೀಯವಾಗಿದೆ.