ಡ್ರ್ಯಾಗನ್ ಅರಮನೆ ದೇವಸ್ಥಾನವು ಬಹಳ ದೊಡ್ಡದಾದ, ನಾಗ್ಪುರದಲ್ಲಿರುವ ಪ್ರಮುಖ ದೇವಸ್ಥಾನ. ಸುಮಾರು 10 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿ ತಲೆ ಎತ್ತಿ ನಿಂತಿದೆ. ನಾಗ್ಪುರದ ಸ್ಯಾಟಲೈಟ್ ಟೌನ್ ಕಂಪ್ಟೀಯಲ್ಲಿ ಇದೆ. ಬೌದ್ಧ ಪ್ರಾರ್ಥನಾ ಮಂದಿರ ಕೂಡಾ ಇಲ್ಲಿದೆ. ಹಾಲ್ನ ಮೊದಲ ಮಹಡಿಯಲ್ಲಿ ದೊಡ್ಡದಾದ ಒಂದು ಬೌದ್ಧ ಮೂರ್ತಿಯಿದೆ.
ಈ ದೇವಸ್ಥಾನವನ್ನು ತಾವರೆ ಅರಮನೆ ಎಂದೂ ಕೂಡಾ ಕರೆಯಲಾಗುತ್ತದೆ. ಹಸಿರು ಉದ್ಯಾನದ ಮಧ್ಯದಲ್ಲಿ ಈ ದೇವಸ್ಥಾನ ನೆಲೆ ನಿಂತಿದೆ. ಇದರ ವಿಶಿಷ್ಟವಾದ ವಾಸ್ತುಶಿಲ್ಪದಿಂದಾಗಿ, ಈ ದೇವಸ್ಥಾನವು ಉತ್ತಮ ಕಾಂಕ್ರೀಟ್ ರಚನೆಗಾಗಿ ಅಂತರರಾಷ್ಟ್ರೀಯ ಪ್ರಶಸ್ತಿಯನ್ನೂ ಕೂಡಾ ಗೆದ್ದುಕೊಂಡಿದೆ.