Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗರಕೋಯಿಲ್ » ಹವಾಮಾನ

ನಾಗರಕೋಯಿಲ್ ಹವಾಮಾನ

ಅಕ್ಟೋಬರ್- ಫೆಬ್ರವರಿ ನಾಗರಕೋಯಿಲ್ಗೆ ಭೇಟಿ ನೀಡಲು ತಕ್ಕ ಸಮಯ. ಈ ಸಮಯದಲ್ಲಿ ಉರಿವ ಸೂರ್ಯ ಸ್ವಲ್ಪ ಮಟ್ಟಿಗೆ ತಂಪಾಗಿರುತ್ತಾನೆ. ಈ ಸಮಯದಲ್ಲಿ ಪ್ರವಾಸಕ್ಕೆ ಮತ್ತು ಸುತ್ತಾಟಕ್ಕೆ ಹೇಳಿಮಾಡಿಸಿದ ಹವಾಮಾನವಿರುತ್ತದೆ.

ಬೇಸಿಗೆಗಾಲ

ನಾಗರಕೋಯಿಲ್ ಸಮುದ್ರಕ್ಕೆ ಸಮೀಪದಲ್ಲಿರುವುದರಿಂದ ಬೇಸಿಗೆಯಲ್ಲಿ ಹೆಚ್ಚಿನ ಧಗೆಯಿರುತ್ತದೆ. ಈ ಸಮಯದಲ್ಲಿ ಉಷ್ಣತೆಯು ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ವರೆಗೂ ಇರುತ್ತದೆ. ಈ ದಿನಗಳಲ್ಲಿ ಸೂರ್ಯ ಅತ್ಯಂತ ಪ್ರಕಾಶಮಾನವಾಗಿ ಉರಿಯುತ್ತಿರುತ್ತಾನೆ. ಆದ್ದರಿಂದ ಮಧ್ಯಾಹ್ನಗಳಲ್ಲಿ ಸಹಿಸಲು ಅಸಾಧ್ಯವಾದ ಶೆಖೆಯಿರುತ್ತದೆ.

ಮಳೆಗಾಲ

ಮೇ ತಿಂಗಳ ಕೊನೆಯಿಂದ ಸೆಪ್ಟಂಬರ್ವರೆಗೆ ಮಳೆಗಾಲ. ಈ ಪ್ರದೇಶದಲ್ಲಿ ಗುಡುಗು ಮಿಂಚಿನ ಸಹಿತ ಭಾರಿ ಮಳೆಯಾಗುತ್ತದೆ. ಉಷ್ಣತೆಯು 25 ಡಿಗ್ರಿ ಸೆಲ್ಸಿಯಸ್ಗೆ ಇಳಿಯುತ್ತದೆ. ಆದರೂ ಧಗೆ ಮಾತ್ರ ಹಾಗೆ ಇರುತ್ತದೆ.

ಚಳಿಗಾಲ

ನವಂಬರ್ - ಫೆಬ್ರವರಿ ಚಳಿಗಾಲ. ನಾಗರಕೋಯಿಲ್ನಲ್ಲಿ ಚಳಿಗಾಲಗಳು ಆಹ್ಲಾದಕರವಾಗಿರುತ್ತದೆ. ಈ ಸಮಯದಲ್ಲಿ ಉಷ್ಣತೆಯು 20-22 ಸೆಲ್ಸಿಯಸ್ನಷ್ಟಿರುತ್ತದೆ. ಧಗೆ ಕಡಿಮೆಯಾಗಿ ವಾತಾವರಣವು ತಂಪಾಗುತ್ತದೆ. ರಾತ್ರಿಗಳಲ್ಲಿ ಸ್ವಲ್ಪ ಮಟ್ಟಿಗಿನ ಚಳಿಯಿರುತ್ತದೆ.