Search
  • Follow NativePlanet
Share
ಮುಖಪುಟ » ಸ್ಥಳಗಳು» ನಾಗಾಲ್ಯಾಂಡ್

ಪ್ರಕೃತಿ ಹರಸಿದ ನಾಡು ನಾಗಾಲ್ಯಾಂಡ್

ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ ಹಾಗು ಮ್ಯಾನ್ ಮಾರ್ ಗಳಿಂದ ಸುತ್ತುವರೆದಿರುವ, ಭಾರತದ ಈಶಾನ್ಯ ರಾಜ್ಯಗಳಲ್ಲೊಂದಾದ, ಪರ್ವತಗಳ ನಾಡೇ ಈ ನಾಗಾಲ್ಯಾಂಡ್. ಇದು ಕೃಷಿಕರ ಭೂಮಿ. ಇಲ್ಲಿನ ಜನರ ಪ್ರಾಮಾಣಿಕತೆಗೆ ಒಲಿದ ಪ್ರಕೃತಿಯು ಅಧಮ್ಯ ಸಸ್ಯ ಹಾಗು ಪ್ರಾಣಿ ಸಂಪತ್ತನ್ನು ನೀಡಿ ಹರಸಿದೆ. ಚರಿತ್ರೆಯ ಪುಟಗಳಲ್ಲಿ ಸ್ಥಾನ ಪಡೆದಿರುವ ಈ ನಾಡು ಸಾಂಸೃತಿಕ ಸಿರಿತನ ಉಳ್ಳದ್ದು.     

ಗಗನಚುಂಬಿ ಪರ್ವತಗಳು, ವಿವಿಧ ಸಸ್ಯ - ಪ್ರಾಣಿ ಸಂಪತ್ತು, ವಿಭಿನ್ನ ಸಂಸ್ಕೃತಿ, ಅಮೋಘ ಚರಿತ್ರೆ ಹಾಗು ಮುಗ್ದ ಜನರನ್ನು ಹೊಂದಿರುವ ಪುಟಾಣಿ ಗಡಿರಾಜ್ಯ "ನಾಗಾಲ್ಯಾಂಡ" ನ ಕಿರು ಪರಿಚಯ ನಿಮಗಾಗಿ..... .ಭಾರತದ ಅತಿ ಚಿಕ್ಕ ರಾಜ್ಯಗಳಲ್ಲಿ ಒಂದಾದ ನಾಗಾಲ್ಯಾಂಡ್, ತನ್ನ ಸಾಂಸ್ಕೃತಿಕ ಹಿನ್ನೆಲೆಯಿಂದಾಗಿ "ಈಶಾನ್ಯದ ಸ್ವಿಡ್ಜರ್ ಲ್ಯಾಂಡ್" ಎಂಬ ನಾಮಾಂಕಿತ ಪಡೆದ ರಾಜ್ಯ. ಪ್ರವಾಸಿಗರಿಗೆ ನಾಗಾಪ್ರಕೃತಿ ನೀಡುವ ರಸದೌತಣದಿಂದಾಗಿ ಇದು ನೈಸರ್ಗಿಕ ಪ್ರವಾಸಿತಾಣವಾಗಿ ರೂಪುಗೊಂಡಿದೆ.

ಪ್ರಕೃತಿ ಮಾತೆಯ ಮಡಿಲಲ್ಲಿ ನಾಗಾಲ್ಯಾಂಡ್

ನಾಗಾದ ನೆಲದಲ್ಲಿ ನೀವು ಸಂಚರಿಸುತ್ತಾ ಹೋದಂತೆ ಚಿತ್ರಸದೃಶ ದೃಶ್ಯಗಳು ನಿಮ್ಮನ್ನು ಸ್ವಾಗತಿಸುವವು. ಇಲ್ಲಿನ ಸೃಷ್ಟಿಯ ರಮ್ಯನೋಟ, ಹಸಿರು ವನರಾಶಿ, ಬಾನಿಗೆ ರಂಗನೆರಚಿದಂತೆ ಭಾಸವಾಗುವ ಸೂರ್ಯಾಸ್ತ ಮತ್ತು ಸೂರ್ಯೋದಯದ ದೃಶ್ಯಗಳು ಪ್ರವಾಸಿಗರ ಮನದಲ್ಲಿ ಅಚ್ಚಳಿಯದ ಸವಿನೆನಪಾಗಿ ನೆಲೆಸುವಂತಹವು. ನೀವೂ ಸಹ ಇಂತಹ ಅವಿಸ್ಮರಣೀಯ ಅನುಭವವನ್ನು ನಿಮ್ಮದಾಗಿಸಿಕೊಳ್ಳ ಬಯಸಿದ್ದರೆ, ಪ್ರಕೃತಿಯ ಆರಾಧಕರಾಗಿದ್ದರೆ ನಿಮ್ಮ ರಜಾದಿನಗಳನ್ನು ಕಳೆಯಲು ನಾಗಾಲ್ಯಾಂಡ್ ಗಿಂತ ಉತ್ತಮ ತಾಣ ಇನ್ನೊಂದಿರಲಾರದು.

ನಾಗಾಲ್ಯಾಂಡಿನ ಭೂಗೋಲ ಹಾಗು ವಾಯುಗೋಲ

ಪರ್ವತಗಳ ನಾಡಾದ ನಾಗಾಲ್ಯಾಂಡ್, ಪಶ್ಚಿಮದಲ್ಲಿ ಅಸ್ಸಾಂ, ಉತ್ತರದಲ್ಲಿ ಅರುಣಾಚಲಪ್ರದೇಶ, ದಕ್ಷಿಣದಲ್ಲಿ ಮಣಿಪುರ ರಾಜ್ಯಗಳಿದ್ದು ಪೂರ್ವದಲ್ಲಿ ಮ್ಯಾನ್ ಮಾರ (ಬರ್ಮಾ) ದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಹನ್ನೊಂದು ಆಡಳಿತಾತ್ಮಕ ಜಿಲ್ಲೆಗಳನ್ನು ಹೊಂದಿರುವ ಈ ರಾಜ್ಯದಲ್ಲಿ ಸುಮಾರು 16 ಗಿರಿಜನ ಪಂಗಡಗಳು ನೆಲೆಸಿವೆ ಅವರಲ್ಲಿ ಪ್ರಮುಖ್ರಾದವರು ನಾಗಾಗಳು ಇವರೇ ಇಲ್ಲಿನ ಸ್ಥಳೀಯ ನಿವಾಸಿಗಳು. ಆಡು ಭಾಷೆಯಲ್ಲಿ "ನಾಗಾ" ಆಗಿರುವ "ನಾಕಾ" ಶಬ್ದವು ಬರ್ಮೆಸೆ ಬಾಷೆಯದ್ದಾಗಿದೆ.

ನಾಕಾ ಎಂದರೆ "ಚಿಕ್ಕ ಮೂಗಿನ ಜನರು" ಎಂದರ್ಥ. ಚಿಕ್ಕ ಮೂಗಿನ ಜನರು ಇರುವ ಲ್ಯಾಂಡ್ (ಭೂಮಿ), ನಾಗಾಲ್ಯಾಂಡ್  ಎಂದು ಹೆಸರು ಪಡೆದಿದೆ.ಕೊಹಿಮಾ ನಾಗಾಲ್ಯಾಂಡ್ ದ ರಾಜ್ಯಧಾನಿಯಾಗಿದ್ದು, ದಿಮಾಪುರ್ ಇಲ್ಲಿನ ಅತಿ ದೊಡ್ಡ ನಗರವಾಗಿದೆ. 3,840 ಮೀಟರ ಎತ್ತರದ ಮೌಂಟ್ ಸಾರಾಮತಿಯು ಇಲ್ಲಿನ ಅತಿ ಎತ್ತರದ ಶಿಖರ. ಈ ಪರ್ವತ ಶೇಣಿಯು ನಾಗಾಲ್ಯಾಂಡ್ ಹಾಗು ಬರ್ಮಾ ನಡುವಿನ ಗಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಇನ್ನು ಪ್ರಕೃತಿಯ ಕೈಗೂಸಾಗಿರುವ ನಾಗಾಲ್ಯಾಂಡಿನ ವಾಯುಗುಣದ ಬಗ್ಗೆ ಹೇಳುವದೇನಿದೆ ? ವರ್ಷದ ಹನ್ನೆರಡೂ ತಿಂಗಳು ಪ್ರಶಾಂತ ಹವಾಮಾನವನ್ನು ಹೊಂದಿರುವ ಈ ರಾಜ್ಯಕ್ಕೆ ಯಾವಾಗ ಬೇಕಾದರೂ ಪ್ರವಾಸಾರ್ಥಿಗಳು ಬೇಟಿನೀಡಬಹುದು. ಆದರೆ ಬೇಟಿನೀಡಿದವರೆಲ್ಲರೂ ಪ್ರಫುಲ್ಲ ಮನಸ್ಕರಾಗಿ ಸವಿನೆನಪುಗಳ ಬುತ್ತಿಯೊಂದಿಗೆ ಹಿಂದಿರುಗುವದು ಖಚಿತ.

ನಾಗಾದ ಜನ, ಅವರ ಆಹಾರ ಹಾಗು ಅವರ ಸಂಸೃತಿ

ನಾಗಾಲ್ಯಾಂಡನಲ್ಲಿ ಬೇರೆ ಬೇರೆ ಪಂಗಡದವರು ಬೇರೆ ಬೇರೆ ರೀತಿಯ ಆಹಾರವನ್ನು ಸೇವಿಸುತ್ತಾರಾದರೂ ಮೀನು ಮತ್ತು ಮಾಂಸ ಎಲ್ಲ ಪಂಗಡಗಳಲ್ಲೂ ಪ್ರಮುಖ ಪದಾರ್ಥ. ಉಳಿದಂತೆ ಬೆಂದ ತರಕಾರಿಗಳ ಖಾದ್ಯ, ಅನ್ನ, ಮಾಂಸದ ಖಾದ್ಯಗಳನ್ನೂ ನಾಗಾಗಳು ಸೇವಿಸುವರು. ಅವರ ಅಡಿಗೆಗಳಲ್ಲಿ ಹೆಚ್ಚಿನವು ಉಗಿಯಲ್ಲಿ ಬೇಯಿಸಿದವಾಗಿರುತ್ತವೆ. ನಾಗಾ ಜನರು ರತ್ನ ಪ್ರೀಯರು. ಅವರ ಪಾರಂಪರಿಕ ಉಡುಗೆಗಳೊಂದಿಗೆ ಅವರು ಅಲಂಕರಿಸಿಕೊಳ್ಳುವ ಕಲಾತ್ಮಕ ಆಭರಣಗಳು, ಮಣಿಗಳು, ರತ್ನಗಳು ಇನ್ನಷ್ಟು ಮೆರಗುನೀಡುವವು. ಹಾಗೇ ಸುಮ್ಮನೆ ಅವರನ್ನು ವೀಕ್ಷಿಸುವುದೇ ಕಣ್ಣಿಗೆ ರಸದೌತಣ.

ಇಷ್ಟೊಂದು ಸಿಂಗರಿಸಿ ಕೊಳ್ಳುವ ನಾಗಾನಿವಾಸಿಗಳು ತಮ್ಮ ಸರಳ ನಡೆ-ನುಡೆ, ಪ್ರೀತಿ ಪುರ್ವಕ ಆದರಾತಿತ್ಯಗಳಿಂದ ನಮ್ಮ ಮನ ಗೆಲ್ಲುತ್ತಾರೆ.ನಾಗಾಗಳ ಸಂಸ್ಕೃತಿಯ ಬಗ್ಗೆ ಮಾತನಾಡುವುದೆಂದರೆ ಸಮುದ್ರದೊಳಗೆ ಈಜಿದಂತೆ. ಶೃತಿಬದ್ದ ಹಾಡು, ಲಯಬದ್ದ ಕುಣಿತಗಳು ಇವರ ದೈನಂದಿನ ಜೀವನದಲ್ಲಿ ಹಾಸಿಹೊಕ್ಕಾಗಿವೆ. ನಾಗಾಗಳಿಗೆ ಜೀವನವೇ ಒಂದು ಉತ್ಸವ. ಅವರ ಜೀವನೋತ್ಸಾಹವನ್ನು ನೋಡಿದ ಮೇಲೆ ನಮಗೂ ಹಾಗೆನಿಸದಿರದು.

ನಾಗಾಲ್ಯಾಂಡ್ ನಲ್ಲಿ ನೋಡುವಂತಹ ತಾಣಗಳು

ಇಡೀ ರಾಜ್ಯವೇ ಭುವಿಗಿಳಿದ ಸ್ವರ್ಗದಂತಿರುವಾಗ ಪ್ರತ್ಯೇಕ ಸ್ಥಳಗಳನ್ನು ಹೇಗೆ ಹೆಸರಿಸುವುದು? ಕೊಹಿಮಾ, ಮೋನ್, ಧಿಮಾಪುರ್, ವೊಖ್, ಫೆಕ್, ಪೆರೆನ್........ಇರುವ ಹನ್ನೊಂದು ಜಿಲ್ಲೆಗಳಲ್ಲಿ ಎಲ್ಲಿ ಹೋದರೂ ಕಣ್ಣಿಗೆ ಹಬ್ಬವೇ.

ತಲುಪುವ ಬಗೆ

ರಾಜ್ಯದಲ್ಲಿ ರೈಲ್ವೆ ಸೌಲಭ್ಯ ಕಡಿಮೆಇದ್ದು,  ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳ ಮೂಲಕ  ರಸ್ತೆ ಮಾರ್ಗವಾಗಿ ನಾಗಾಲ್ಯಾಂಡನ್ನು ಸುತ್ತಬಹುದು. ಕೊಹಿಮಾ ದಿಂದ  43.5 ಮೈಲಿ (70.0 ಕಿ) ದೂರವಿರುವ ಧಿಮಾಪುರ್ ದಲ್ಲಿ ರಾಜ್ಯದ ಏಕಮಾತ್ರ ವಾಯುನೆಲೆ ಇದೆ. ಹಾಗಾದರೆ ತಡವೇಕೆ ಈ ಸಲದ ರಜೆ ನಾಗಾಗಳೊಂದಿಗೆ.  ಏನಂತೀರಿ? ಹ್ಯಾಪಿ ಜರ್ನಿ...

ನಾಗಾಲ್ಯಾಂಡ್ ಸ್ಥಳಗಳು

  • ದಿಮಾಪುರ್ 31
  • ಕೊಹಿಮಾ 26
  • ಮೊಕೊಕ್ಚಂಗ್ 6
  • ಮೋನ್ 7
  • ಪೆಕ್ 6
One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat