Search
  • Follow NativePlanet
Share
ಮುಖಪುಟ » ಸ್ಥಳಗಳು » ಮೈಸೂರು » ಆಕರ್ಷಣೆಗಳು » ಮೈಸೂರು ಅರಮನೆ

ಮೈಸೂರು ಅರಮನೆ, ಮೈಸೂರು

20

ಮೈಸೂರು ಅರಮನೆಯು ಅತಿ ಪ್ರಸಿದ್ಧಿಯನ್ನು ಹೊಂದಿದ್ದು, ಮೈಸೂರು ನಗರಕ್ಕೆ ಭೇಟಿ ಕೊಡುವ ಎಲ್ಲ ಪ್ರವಾಸಿಗರಲ್ಲೂ ಅತ್ಯಂತ ಸೂಚಿತ ಸ್ಥಳವಾಗಿದೆ. ಅರಮನೆಯಲ್ಲಿ ಇಂಡೋ-ಅರೇಬಿಯನ್, ದ್ರಾವಿಡ, ರೋಮನ್ ಮತ್ತು ಓರಿಯೆಂಟಲ್ ವಾಸ್ತುಶಿಲ್ಪ ಶೈಲಿಗಳು ಪ್ರದರ್ಶಿತವಾಗಿದೆ. ಮೂರು ಗುಲಾಬಿ ಅಮೃತಶಿಲೆ ಗುಮ್ಮಟಗಳನ್ನು ಹೊಂದಿರುವ ಈ ಕಟ್ಟಡದ ನಿರ್ಮಾಣದಲ್ಲಿ ಬೂದು ಬಣ್ಣದ ಗ್ರಾನೈಟ್ ಅನ್ನು ಬಳಸಲಾಗಿದೆ.

ಅರಮನೆಯು, 44.2 ಮೀ ಎತ್ತರದ ಐದು ಅಂತಸ್ತಿನ ಗೋಪುರವನ್ನು ಹೊಂದಿದ್ದು ಅದರ ಮೇಲಿನ ಗುಮ್ಮಟವನ್ನು ಚಿನ್ನದಲ್ಲಿ ಕೊರೆಯಲಾಗಿದೆ. ನಿಜವಾಗಿಯೂ ಇದೊಂದು ಪ್ರಪಂಚದಲ್ಲೆ ಅದ್ಭುತ ಮಾನವ ನಿರ್ಮಿತ ಪ್ರವಾಸಿ ಆಕರ್ಷಣೆಯಾಗಿದ್ದು, ಪ್ರತಿಷ್ಠಿತ ಪತ್ರಿಕೆಯಾದ 'ನಿವ್ ಯಾರ್ಕ್ ಟೈಮ್ಸ್' ಕೂಡ ಈ ತಾಣವನ್ನು ಜಗತ್ತಿನಲ್ಲಿ 31 ನೋಡಲೇ ಬೇಕಾದ ಪಟ್ಟಿಯಲ್ಲಿ ನಮೂದಿಸಿದೆ.

ಪ್ರವಾಸಿಗರು ಈ ಸ್ಥಳಕ್ಕೆ 'ಗೊಂಬೆ ತೊಟ್ಟಿ' ಅಥವಾ 'ಡಾಲ್ಸ್ ಪೆವೀಲಿಯನ್' ನಿಂದ ಪ್ರವೇಶ ಮಾಡಬಹುದು. ಇಲ್ಲಿ ಸುಮಾರು 19 ರಿಂದ 20ನೇ ಶತಮಾನದ ಪ್ರಾರಂಭದ ಕಾಲದಲ್ಲಿನ ಬೊಂಬೆಗಳನ್ನು ಕಾಣಬಹುದಾಗಿದೆ. ಇದನ್ನು ಹೊರತುಪಡಿಸಿದರೆ 81 ಕೆ‌ಜಿ ಬಂಗಾರದಿಂದ ಅಲಂಕೃತವಾದ ಮರದ ಆನೆ 'ಹೌಡಾ' ಅಲ್ಲಿದೆ. ಗೊಂಬೆ ತೊಟ್ಟಿಯ ಮುಂಭಾಗದಲ್ಲಿ ದಸರಾ ಉತ್ಸವದ ಆರಂಭ ಮತ್ತು ಮುಕ್ತಾಯಗಳನ್ನು ಸೂಚಿಸಲು ಏಳು ತೋಪುಗಳನ್ನು ಬಳಸಲಾಗುತ್ತದೆ. ಈ ಉತ್ಸವದಲ್ಲಿ 200 ಕೆ‌ಜಿ ಬಂಗಾರದ ಆಸನವನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗುತ್ತದೆ.

ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು, ರಾಜವಂಶಸ್ಥರ ವೈಭವದ ಉಡುಗೆತೊಡುಗೆಗಳು, ಚಿತ್ರ ಕಲಾಕೃತಿ ಮತ್ತು ಉಪಯೋಗಿಸುತ್ತಿದ್ದ ಒಡವೆಗಳನ್ನು ಪ್ರತ್ಯೇಕವಾದ ಪ್ರದರ್ಶನಾ ಕೋಣೆಗಳಲ್ಲಿ ಕಾಣಬಹುದು. ಈ ಸ್ಥಳದ ಗೋಡೆಗಳನ್ನು, ಸಿದ್ದಲಿಂಗ ಸ್ವಾಮಿ, ರಾಜಾ ರವಿವರ್ಮ ಮತ್ತು ಕೆ.ವೆಂಕಟಪ್ಪನವರ ರಚಿತ ವರ್ಣ ಕಲಾಕೃತಿಗಳಿಂದ ಅಲಂಕರಿಸಲಾಗಿದೆ. 14 ರಿಂದ 20ನೇ ಶತಮಾನದ ಮಧ್ಯದ ಅವಧಿಯಲ್ಲಿ ನಿರ್ಮಿತ ಈ ಮೈಸೂರು ಅರಮನೆಯೂ ವಿವಿಧ ಪ್ರಕಾರದ ವಾಸ್ತುಶಿಲ್ಪ ಶೈಲಿಯನ್ನು ಬಿಂಬಿಸುವ ಹನ್ನೆರಡು ದೇವಾಲಯಗಳನ್ನು ಹೊಂದಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun