ಗಣೇಶ್ ಧಾಮ್ ಎಂಬುದು ಭಗವಾನ್ ಗಣೇಶನಿಗೆ ಅರ್ಪಿತವಾದ ಪ್ರಸಿದ್ಧ ದೇವಾಲಯವಾಗಿದೆ. ದೇವಾಲಯದ ಪ್ರಮುಖ ಆಕರ್ಷಣೆಯೆಂದರೆ, 35 ಎತ್ತರದ ಬೃಹತ್ ಗಣೇಶ ಮೂರ್ತಿ. ಕೆಲ ವರ್ಷಗಳ ಹಿಂದೆ, ಅಲ್ಲಿನ ಇಬ್ಬರು ಸ್ಥಳೀಯ ಗಣ್ಯರಿಂದ ಈ ಮೂರ್ತಿಯು ಪ್ರ ತಿಷ್ಟಾಪಿಸಲ್ಪತ್ತಿತು. ಎರಡು ನದಿಗಳು ಗಣೇಶ್ ಧಾಮ್ ನ ಸನಿಹದಲ್ಲಿಯೇ ಹರಿಯುತ್ತಿದ್ದು, ಅವು ಅಲ್ಲಿನ ಸಹಜ ಸೌಂದರ್ಯಕ್ಕೆ ಮತ್ತಷ್ಟು ಸೊಬಗು ನೀಡಿವೆ. ಇದೇ ದೇವಾಲಯದ ಸಂಕೀರ್ಣದಲ್ಲಿ, ಭಗವಾನ್ ಹನುಮಂತನ ಬೃಹತ್ ವಿಗ್ರಹವಿದೆ.