ಮಸ್ಸೂರಿಯ ಹೃದಯಭಾಗದಲ್ಲಿರುವ ಮಾಲ್ ಒಂದು ಪ್ರಮುಖವಾದ ಖರೀದಿ ತಾಣವಾಗಿದೆ. ವಸಾಹತು ಕಾಲದ ಶೈಲಿಯ ಬೆಂಚುಗಳು ಮತ್ತು ದೀಪ ಸ್ತಂಭಗಳು ರಸ್ತೆಯ ಬದಿಯಲ್ಲಿದ್ದು ನರಗದ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ.
ಇಲ್ಲಿನ ರಸ್ತೆಯ ಮತ್ತೊಂದು ಪ್ರಮುಖವಾದ ಆಕರ್ಷಣೆ 1980 ರ ಶೈಲಿಯ ವಿಡೀಯೋ ಗೇಮ್ ಪಾರ್ಲರ್ ಗಳು. ಸ್ಕೇಟಿಂಗ್ ರಿಂಗ್ಸ್ ಮತ್ತು ಮೆಥೊಡಿಸ್ಟ್ ಚರ್ಚ್. ಟಿಬೆಟ್ ನ ಜನರು ಟಿಬೆಟಿಯನ್ ಪೋಷಾಕಿನೊಂದಿಗೆ ಇಲ್ಲಿನ ಮಾರುಕಟ್ಟೆಯಲ್ಲಿ ಲೋಹದ ವಸ್ತುಗಳು, ಉಣ್ಣೆಯ ಬಟ್ಟೆಗಳು, ಮರದ ವಸ್ತುಗಳು, ಗೋಡೆಯ ಮೇಲೆ ತೂಗುಹಾಕುವ ವಸ್ತುಗಳು ಮತ್ತಿತರ ಆಮದು ಮಾಡಿದ ವಸ್ತುಗಳನ್ನು ಮಾರಾಟ ಮಾಡುತ್ತಿರುತ್ತಾರೆ. ಇದರ ಜೊತೆಗೆ ಪ್ರವಾಸಿಗರು ವಾಕಿಂಗ್ ಸ್ಟಿಕ್ ಗಳು, ಆಭರಣಗಳು, ಪಿಂಗಾಣಿ ಬಟ್ಟಲುಗಳು, ತಟ್ಟೆಗಳು ಮತ್ತು ತೊಟ್ಟಿಗಳನ್ನು ಮಾರುಕಟ್ಟೆಯುಲ್ಲಿ ಖರೀದಿಸಬಹುದಾಗಿದೆ.