ಲಾನ್ಡೌರ್ ಬಜಾರ್, ಮಸ್ಸೂರಿಯ ಒಂದು ಪ್ರಖ್ಯಾತವಾದ ಮಾರುಕಟ್ಟೆಯಾಗಿದೆ. ಈ ಸ್ಥಳವು ಇದರ ಸ್ಥಾಪಕರಾದ ಕ್ಯಾಪ್ಟನ್ ಯಂಗ್ ರ ಮುಲ್ಲಿಂಗರ್ ಎಸ್ಟೇಟ್ ಗೆ ಪ್ರಖ್ಯಾತವಾಗಿದೆ. ಈ ಸ್ಥಳದಲ್ಲಿರುವ ವಾಸ್ತುಶಿಲ್ಪದ ಶೇಷ್ಠತೆಗೆ ಹಲವಾರು ಜನರು ಪ್ರತಿವರ್ಷ ಇಲ್ಲಿಗೆ ಭೇಟಿ ನೀಡುತ್ತಾರೆ.
ಈ ಪ್ರದೇಶದ ಇನ್ನೊಂದು ಪ್ರಮುಖ ಆಕರ್ಷಣೆ ವುಡ್ ಸ್ಟಾಕ್ ಸ್ಕೂಲ್. ಸೈಂಟ್ ಪಾಲ್ ಚರ್ಚ್, ಸೈನಿಕರ ಸ್ಮಶಾನ, ಲಾನ್ಡೌರ್ ಪಬ್ಲಿಕ್ ಸ್ಕೂಲ್ ಮತ್ತು ಇಲ್ಲಿರುವ ಬ್ರಿಟೀಷರ ಶೈಲಿಯ ಹಲವಾರು ಕಟ್ಟಡಗಳು. ಚಾರ್ ದುಕಾನ್ ಎಂದು ಕರೆಯಲಾಗುವ ಚಹಾ ಮತ್ತು ಸಂಜೆಯ ವೇಳೆ ತಿಂಡಿಗಳನ್ನು ಮಾರಾಟ ಮಾಡುವ ಸಣ್ಣ ಮಾರುಕಟ್ಟೆ ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆ. ಇದಲ್ಲದೆ ಮರದ ಮೇಲಿರುವ ಕೈಯಿಂದ ಕೆತ್ತಿದ ಬರಹಗಳಿಗೆ ಇದು ಪ್ರಸಿದ್ಧವಾಗಿದೆ.