ಸಮುದ್ರ ಮಟ್ಟದಿಂದ ಸುಮಾರು 2100 ಮೀ ಎತ್ತರದಲಿರುವ ಜ್ವಾಲಾ ದೇವಿ ದೇವಸ್ಥಾನ ಮಸ್ಸೂರಿಯ ಪ್ರಮುಖ ಸ್ಥಳಗಳಲ್ಲಿ ಒಂದು. ಬೆನೋಗ್ ಬೆಟ್ಟದ ಮೇಲಿರುವ ಈ ದೇವಸ್ಥಾನಕ್ಕೆ ತಲುಪುವ ಹಾದಿಯು ಮೋಡದ ಮರೆಯಲ್ಲಿ ಆರಂಭವಾಗಿ ದೇವದಾರು ಮತ್ತಿತರ ಮರಗಳಿರುವ ದಟ್ಟ ಅರಣ್ಯದ ನಡುವೆ ಹಾದು ಹೋಗುತ್ತದೆ. ದುರ್ಗೆಗೆ ಮುಡಿಪಾಗಿರುವ ಈ ದೇವಸ್ಥಾನದಲ್ಲಿ ಸುಂದರವಾದ ದುರ್ಗೆಯ ಕಲ್ಲಿನ ಮೂರ್ತಿ ಇದೆ. ಇಲ್ಲಿಂದ ಯಮುನಾ ಕಣಿವೆ ಮತ್ತು ಶಿವಾಲಿಕ್ ಶ್ರೇಣಿಯ ಸೌಂದರ್ಯವನ್ನು ಸವಿಯಬಹುದಾಗಿದೆ.