ಇದು ಸಮುದ್ರ ಮಟ್ಟದಿಂದ ಸುಮಾರು 2122 ಮೀ ಎತ್ತರದಲ್ಲಿದ್ದು ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇದು ಎರಡನೆಯ ಎತ್ತರದ ಗಿರಿಧಾಮವಾಗಿದೆ. ಇದು ಐತಿಹಾಸಿಕ ಕಾರಣಗಳಿಂದಾಗಿಯೂ ಪ್ರಸಿದ್ಧವಾಗಿದೆ. ಸ್ವಾತಂತ್ರ ಪೂರ್ವ ಕಾಲದಲ್ಲಿ ಈ ಬೆಟ್ಟದಿಂದ ಜನರಿಗೆ ಸಮಯ ತಿಳಿಸುವ ಉದ್ದೇಶದಿಂದ ಕೆಲವು ನಿಗದಿತ ಸಮಯದಲ್ಲಿ ತೋಪನ್ನು ಹಾರಿಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಇಲ್ಲಿನ ಜನರು ಅದಕ್ಕೆ ಸರಿಯಾಗಿ ತಮ್ಮ ಗಡಿಯಾರಗಳನ್ನು ಸರಿಮಾಡಿಕೊಳ್ಳುತ್ತಿದ್ದರು. ಈಗ ಮಸ್ಸೂರಿಯ ನೀರಿನ ಸಂಗ್ರಹಾಲಯ ಈ ಬೆಟ್ಟದಲ್ಲಿದೆ. ಇಲ್ಲಿನ ಬೆಟ್ಟಕ್ಕೆ ತಲುಪಲು ಇರುವ ರೋಪ್ ವೆ ಬಹಳ ಪ್ರಸಿದ್ಧವಾಗಿದೆ.
ಇಲ್ಲಿಂದ ಹಿಮಾಲಯ ಪರ್ವತವನ್ನು ಮತ್ತು ಇಲ್ಲಿ ಖರೀದಿಗೆ ಪ್ರಸಿದ್ಧವಾದ 'ಮಾಲ್ ರೋಡ್' ಅತ್ಯಂತ ಸುಂದರವಾಗಿ ಕಾಣುತ್ತದೆ. ಇಲ್ಲಿಗೆ ತಲುಪಲು ಪ್ರವಾಸಿಗರು ರೋಪ್ ವೇ ಮೂಲಕವೇ ತಲುಪಬೇಕಾಗಿದೆ. ಇದು ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ನಿಗದಿತ ವೇಳೆಯಲ್ಲಿ ಚಲಿಸುತ್ತದೆ. ನಡೆಯಲು ಇಷ್ಟಪಡುವವರು ಮಾಲ್ ನಿಂದ ನಡಿಗೆಯ ಮೂಲಕವೂ ಇಲ್ಲಿ ತಲುಪಬಹುದು.