ದಟ್ಟ ಅರಣ್ಯ ಮತ್ತು ಹಿಮದ ನಡುವೆ ಆವೃತ್ತವಾದ ಬೆನೋಗ್ ವನ್ಯಜೀವಿ ಅಭಯಾರಣ್ಯವೂ ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆ. ಚೌಖಂಬಾ ಮತ್ತು ಬಂದಾರ್ ಪಂಚ್ ಈ ಅಭಯಾರಣ್ಯದಲ್ಲಿರುವ ಎರಡೂ ಪ್ರಮುಖ ಶಿಖರಗಳು. ಅಳಿವಿನ ಅಂಚಿನಲ್ಲಿರುವ ಕೆಂಪು ಕೊಕ್ಕಿನ ನೀಲಿ ಮಡಿವಾಳ ಹಕ್ಕಿ ಮತ್ತು ಹಿಮಾಲಯದ ಕ್ವಿಲ್ ಹಕ್ಕಿಗಳ ಆವಾಸ ಸ್ಥಾನ ಇದಾಗಿದೆ. ಅವಿಫೌನಾ ದ ಜೊತೆಗೆ ಪ್ರವಾಸಿಗರು ಇಲ್ಲಿ ಜಿಂಕೆ ಮತ್ತು ಚಿರತೆಗಳನ್ನು ಇಲ್ಲಿ ಕಾಣಬಹುದಾಗಿದೆ. ಹಿಮಾಲಯದ ಕ್ವಿಲ್ ಅನ್ನು 1876 ರಲ್ಲಿ ಕೊನೆಯ ಬಾರಿ ಇಲ್ಲಿ ಕಾಣಲಾಗಿತ್ತು. ಇಲ್ಲಿನ ಸಸ್ಯರಾಶಿಯಲ್ಲಿ ಫಿರ್ ಮತ್ತು ಪೈನ್ ಮರಗಳನ್ನು ಕಾಣಬಹುದು. ಇದರ ಜೊತೆಗೆ ಔಷಧೀಯ ಮೌಲ್ಯವಿರುವ ಸಸ್ಯಗಳೂ ಇಲ್ಲಿವೆ. ಹಿಮಾಲಯ ಮೇಕೆ ಮತ್ತು ಹಿಮ ಕರಡಿ ಮತ್ತು ಚಿರತೆಗಳೂ ಇಲ್ಲಿ ಕಾಣಸಿಗುತ್ತವೆ. ಮಸ್ಸೂರಿ ಮತ್ತು ಡೆಹ್ರಾಡೂನ್ ನಿಂದ ಇಲ್ಲಿಗೆ ಬಸ್ಸು ಮತ್ತು ರಿಕ್ಷಾ ಸೌಲಭ್ಯ ಇದೆ.