Search
  • Follow NativePlanet
Share
ಮುಖಪುಟ » ಸ್ಥಳಗಳು» ಮುರುಡೇಶ್ವರ

 

25

ಮುರುಡೇಶ್ವರ - ಪರಮಶಿವನೊಂದಿಗೆ ಒಂದು ಸೂರ್ಯಾಸ್ತ

 

ಸಮೃದ್ಧವಾದ ಚರಿತ್ರೆಯ ಜೊತೆಗೆ ಜಗತ್ತಿನಲ್ಲಿ ಎರಡನೇ ಅತಿದೊಡ್ಡ  ಶಿವನ ಮೂರುತಿಯಿರುವ  ಸ್ಥಳ ಮುರುಡೇಶ್ವರ . ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ  ಈ ಸ್ಥಳವು  ರಾಮಾಯಣದ ಮೂಲ ಹೊಂದಿದ್ದು, ಸಮುದ್ರದ ಹಿಮ್ಮುಖವಾಗಿಹ  ಶಿವನ ಬೃಹತ್ ಮೂರುತಿಗೆ ಪ್ರಸಿದ್ಧವಾಗಿದೆ.

ಚಿಕ್ಕ ಗುಡ್ಡದ ಮೇಲೆ ಸುಂದರವಾದ ಮತ್ತು ಸಮೃದ್ಧವಾಗಿ ಬೆಳೆದಿಹ ಪರಿಸರದ ಮಧ್ಯದಲ್ಲಿ  ತನ್ನ ಭಕ್ತನಾದ  ನಂದಿಯ ಸಮ್ಮುಖದಲ್ಲಿ ಹಾಗೂ ಆತನ ಇತರೆ ದೇವಾಲಯದ ಆವರ್ಣದಲ್ಲಿರುವ ಪರಮ ಶಿವನ ಮೂರುತಿಯು ನಿಜವಾಗಿಯೂ ಮುರುಡೇಶ್ವರದ ಮನಸ್ಸೂರೆಗೊಳ್ಳುವಂತಹ  ಸ್ಥಳವಾಗಿದೆ.

 

ಸುಪ್ರಸಿದ್ಧ ಶಿವನ ಪ್ರತಿಮೆ

ಮುರುಡೇಶ್ವರದಲ್ಲಿನ ದೇವಾಲಯವು  ಮುಖ್ಯವಾಗಿ  ಭಾರತದಲ್ಲಿನ  ತನ್ನ  ನೆಲೆಗೆ  ಪ್ರಸಿದ್ಧಿ ಹೊಂದಿದ್ದು ಅದು ಮೂರೂಕಡೆಗಳಿಂದಲೂ ಅರೆಬಿಯನ್ ಸಮುದ್ರದಿಂದ ಸುತ್ತು ವರೆದಿದೆ. ಇದೆ ಕಾರಣದಿಂದ  ಆ ಸ್ಥಳವು ಅತೀಯಾದ ಸಮುದ್ರದ ಗಾಳಿ, ಮಳೆ ಹಾಗೂ ಮಾರುತಗಳಿಗೆ ತುತ್ತಾಗುವುದಲ್ಲದೆ ಪ್ರತಿಮೆಯ ಅಂದವನ್ನು  ಹಾಳುಮಾಡಿ ಮೂಲ ಹೊನ್ನಿನ  ಬಣ್ಣವನ್ನು ಅಳಸಿ,  ಒಂದು ಭುಜವನ್ನು  ಹೊಡೆದುಕೊಂಡು ಹೋಗುವಂತೆ ಮಾಡಿವೆ.

ಇತರೆ ಅಚ್ಚರಿಯ ತಾಣಗಳು

 

ದೇವಾಲಯವನ್ನು  ಹೊರತುಪಡಿಸಿ ಇತರೆ ಆಕರ್ಷಣೆಗಳೆಂದರೆ ಸಮುದ್ರ ತೀರದ ಚಟುವಟಿಕೆಗಳಾದ  ಈಜುವುದು, ಈಜು ಕಲಿಯುವಿಕೆ ಹಾಗೂ ದೋಣಿ ವಿಹಾರ  ಇಲ್ಲಿನ ಸಮುದ್ರದ ಸುಂದರ ಹಾಗೂ ಪ್ರಶಾಂತ ವಾತಾವರಣ ದಿಂದ ಪ್ರಸಿದ್ಧವಾಗಿದೆ.  

ಇತರೆ ಜಲಾಕರ್ಷಣೆ ಗಳೆಂದರೆ ಪರಿವಾರ ಸಮೇತವಾಗಿ ಮಕ್ಕಳ ಜೊತೆ ಮಜಾ ಮಾಡಲು ಬರುವವರಿಗೆ  ಬಹಳ ಪ್ರಸಿದ್ಧವಾದ  ಅಲೆಗಳ  ಕೊಳವಿದೆ. ಅದಲ್ಲದೆ ನೀವು ಕೆಲವು  ಬಹು ಅಂತಸ್ತಿನ ಹೋಟೆಲುಗಳನ್ನು  ನೀರಿನ ಮೇಲೆಯೇ ಕಾಣಬಹುದು ಇಲ್ಲಿ ಭೋಜನ ಮಾಡುವುದು ಮರೆಯಲಾಗದ ಅನುಭವವೆಂದರೆ ತಪ್ಪಾಗಲಾರದು  

ಹೋಟೆಲುಗಳು  ಹಾಗೂ ರೆಸಾರ್ಟ್ ಗಳನ್ನು  ಆಯ್ಕೆ ಮಾಡುವ ವಿಷಯದಲ್ಲಿ ಇಲ್ಲಿ ನಿಮ್ಮ  ಬೇಡಿಕೆಯ  ಬೆಲೆಗೆ ತಕ್ಕಂತೆ  ಹಲವು ಆಯ್ಕೆಗಳಿವೆ. ಮುರುಡೇಶ್ವರವು  ಉತ್ತರ ಕನ್ನಡ ಜಿಲ್ಲೆಯಲ್ಲಿ  ನೆಲೆಸಿರುವುದರಿಂದ  ಅಲ್ಲೇ ಆಸುಪಾಸಿನಲ್ಲಿ  ನೀವು ಭೇಟಿ ಕೊಡಬಹುದಾದಂತಹ  ಅನೇಕ  ಆಕರ್ಷಣೆಗಳಿದ್ದು ಅವುಗಳಲ್ಲಿ  ಟಿಪ್ಪು ಸುಲ್ತಾನ್  ಮರುನಿರ್ಮಿಸಿದ  ಕೋಟೆ , ಸಹ್ಯಾದ್ರಿ ಶಿಖರಗಳ ಸಮೀಪದ ಕೋಟೆ  ಹಾಗೂ  ಭಟ್ಕಳದಂತಹ  ಪಟ್ಟಣದ  ಸುತ್ತಮುತ್ತಲಿನ  ಆಕರ್ಷಣೆಗಳು ಪ್ರಸಿದ್ಧವಾದವು .ಅಲ್ಲಿನ  ಉದ್ಧವಾದ  ಕರಾವಳಿ ಪ್ರದೇಶ ಹಾಗೂ  ಸಮೀಪದಲ್ಲೇ ಇರುವ  ಬೆಟ್ಟಗಳನ್ನೂ ಒಳಗೊಂಡಿರುವ ಇತರೆ  ನೈಸರ್ಗಿಕ ಆಕರ್ಷಣೆಗಳೂ ಇವೆ. ಈ ಸ್ಥಳವನ್ನು  ಪ್ರವಾಸಿಸಲು  ಸರಿಯಾದ ಸಮಯವೆಂದರೆ ಅಕ್ಟೋಬರ್  ನಿಂದ ಮಾರ್ಚ್ ರ ವರೆಗೆ.

ಪ್ರವಾಸಿಗರು ಸಹಜವಾಗಿ  ಪಿಜನ್ ದ್ವೀಪ  ಅಥವಾ ನೇತ್ರಾಣಿ  ದ್ವೀಪಗಳಿಗೆ ಹೋಗಲು  ಭಟ್ಕಳದಿಂದ  ಬಾಡಿಗೆ ದೋಣಿಗಳನ್ನು ಬಳಸುವರು, ಆ ಜಾಗಗಳು ನಿರ್ಜನ  ಪ್ರದೇಶವಾಗಿದ್ದು  ಹಿಂದಿನ ಕಾಲದ ಜನರ ಮನೆಗಳ ಪಳಿಯುಳಿಕೆಗಳನ್ನು ಮಾತ್ರ ಹೊಂದಿದೆ. ಸದ್ಯಕ್ಕೆ  ಕುರಿ ಮತ್ತು ಪಕ್ಷಿಗಳಿಗೆ ಆಶ್ರಯವಾಗಿಹ  ಜೀವಿಗಳ ಸಣ್ಣ ಸುಳಿವನ್ನು  ಪಟ್ಟಣದಿಂದ ಬೇರ್ಪಟ್ಟ ಈ ಜಾಗದಲ್ಲಿ ಕಾಣಬಹುದು.

ಮುರುಡೇಶ್ವರ ಪ್ರಸಿದ್ಧವಾಗಿದೆ

ಮುರುಡೇಶ್ವರ ಹವಾಮಾನ

ಉತ್ತಮ ಸಮಯ ಮುರುಡೇಶ್ವರ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮುರುಡೇಶ್ವರ

  • ರಸ್ತೆಯ ಮೂಲಕ
    ಇತರೆ ಪಟ್ಟಣಗಳೊಂದಿಗೆ ರಸ್ತೆಗಳ ಮೂಲಕ ಮುರುಡೇಶ್ವರಕ್ಕೆ ಉತ್ತಮ ಸಂಪರ್ಕವಿದೆ. ಹವಾನಿಯಂತ್ರಿತವಲ್ಲದ ಮತ್ತು ಸೆಮಿ ಸ್ಲೀಪರ್ ಬಸ್ಸುಗಳನ್ನು ಒಳಗೊಂಡು ಹಲವು ವಿಶೇಷ ಮತ್ತು ಖಾಸಗಿ ಬಸ್ಸುಗಳು ಬೆಂಗಳೂರಿನಿಂದ (500ಕಿಮೀ) ಹೊನ್ನಾವರೆದ ವರೆಗೂ9 ( 20ಕಿಮೀ) ಎಲ್ಲ ಸಮಯದಲ್ಲೂ ಲಭ್ಯವಿವೆ.ಹೊನ್ನಾವರ ತಲುಪುವ ಪ್ರವಾಸಿಗರು ಟ್ಯಾಕ್ಸಿ ಅಥವಾ ಕ್ಯಾಬ್ ಅನ್ನು ಬಾಡಿಗೆಗೆ ಪಡೆದು ಮುರುಡೇಶ್ವರವನ್ನು ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಮುರುಡೇಶ್ವರಕ್ಕೆ ತನ್ನದೇ ಆದ ರೈಲು ನಿಲ್ದಾಣವಿದೆ ಆದರೆ ಅದು ಪ್ರಮುಖ ಪಟ್ಟಣಗಳ ಜೊತೆ ಸಂಪರ್ಕ ಹೊಂದಿಲ್ಲ. ಮಂಗಳೂರು ಮತ್ತು ಮುಂಬೈನ ಕೆಲವೇ ರೈಲುಗಳು ಇಲ್ಲಿ ನಿಲ್ಲುತ್ತವೆ . ಮತ್ತೊಂದು ಸಮೀಪದ ರೈಲ್ವೇ ನಿಲ್ದಾಣವೆಂದರೆ ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣ.ಈ ನಿಲ್ದಾಣವು ಮುರುಡೇಶ್ವರದಿಂದ 161 ಕಿ ಮೀ ದೂರದಲ್ಲಿ ನೆಲೆಸಿದ್ದು ಭಾರತದ ಎಲ್ಲ ಪ್ರಮುಖ ನಗರಗಳಿಗೆ ನಿಶ್ಚಿತ ರೈಲುಗಳೊಂದಿಗೆ ಸುಗಮ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮಂಗಳೂರು ವಿಮಾನ ನಿಲ್ದಾಣವು ಮುರುಡೇಶ್ವರಕ್ಕೆ ಅತ್ಯಂತ ಸಮೀಪದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಅದು ಮುರುಡೇಶ್ವರ ಪಟ್ಟಣದಿಂದ 165 ಕಿ ಮೀ ಗಳಷ್ಟು ದೂರದಲ್ಲಿ ನೆಲೆಸಿದೆ. ಈ ವಿಮಾನ ನಿಲ್ದಾಣಕ್ಕೆ ಹಾರಿ ಬರುವ ವಿಮಾನಗಳು ಮಧ್ಯ ಪೂರ್ವ ಭಾಗದ ದೇಶಗಳಿಗೆ ಮತ್ತು ಭಾರತದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri