Search
  • Follow NativePlanet
Share
ಮುಖಪುಟ » ಸ್ಥಳಗಳು » ಮುರುದ್ ಜಂಜೀರಾ » ಹವಾಮಾನ

ಮುರುದ್ ಜಂಜೀರಾ ಹವಾಮಾನ

ಮುರುದ್ ಜಂಜೀರಾವು ಪ್ರಮುಖವಾಗಿ ಸಮಶೀತೋಷ್ಣವಲಯದ ಹವಾಮಾನವನ್ನು ಹೊಂದಿದೆ. ಹಾಗಾಗಿ ವರ್ಷ ಪೂರ್ತಿ ಮುದ ನೀಡುವಂತಹ ಆಹ್ಲಾದಕರವಾದ ವಾತಾವರಣ ಇಲ್ಲಿರುತ್ತದೆ. ಆದರು ಮಳೆಗಾಲದ ನಂತರದ ಕಾಲ ಮತ್ತು ಚಳಿಗಾಲವು ಇಲ್ಲಿಗೆ ಭೇಟಿಕೊಡಲು ಅತ್ಯುತ್ತಮವಾದ ಕಾಲವಾಗಿದೆ. ಅಂದರೆ ಅಕ್ಟೋಬರ್ ನಿಂದ ಫೆಬ್ರವರಿಯವರೆಗಿನ ಕಾಲವು ಮುರುದ್ ಜಂಜೀರಾಕ್ಕೆ ಭೇಟಿಕೊಡಲು ಅತ್ಯುತ್ತಮ ಕಾಲವಾಗಿದೆ.

ಬೇಸಿಗೆಗಾಲ

ಮುರುದ್ ಜಂಜೀರಾದಲ್ಲಿ ಬೇಸಿಗೆಯು ಮಾರ್ಚ್ ನಿಂದ ಜೂನ್‍ವರೆಗೆ ಇರುತ್ತದೆ. ಬೆಚ್ಚನೆಯ ವಾತಾತವರಣವು ಈ ಕಾಲದಲ್ಲಿ ಇರುತ್ತದೆ. ಆದರೂ, ಇಲ್ಲಿನ ಉಷ್ಣಾಂಶವು 32° ಸೆಲ್ಶಿಯಸ್‍ನ್ನು ದಾಟುವುದಿಲ್ಲ.

ಮಳೆಗಾಲ

ಮುರುದ್ ಜಂಜೀರಾದಲ್ಲಿ ಮಳೆಗಾಲದಲ್ಲಿ ಸಾಮಾನ್ಯವಾದ ಮಳೆಯಾಗುತ್ತದೆ. ಈ ಕಾಲವು ಜೂನ್ ನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ. ಈ ಕಾಲವು ಇಲ್ಲಿ ಸುತ್ತಾಡಲು ಹೇಳಿ ಮಾಡಿಸಿದ ಕಾಲವಾಗಿರುತ್ತದೆ.

ಚಳಿಗಾಲ

ನವೆಂಬರ್ ನಿಂದ ಫೆಬ್ರುವರಿಯವರೆಗೆ ಇರುವ ಚಳಿಗಾಲವು ಮುರುದ್ ಜಂಜೀರಾದಲ್ಲಿ ತಂಪಾದ ಮತ್ತು ಆಹ್ಲಾದಕರವಾದ ವಾತಾವರಣವನ್ನು ಒದಗಿಸುತ್ತದೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು 15° ಸೆಲ್ಶಿಯಸ್ ಇರುತ್ತದೆ.