ಸೀತಾ ಕುಂಡ ಒಂದು ಬಿಸಿನೀರಿನ ಬುಗ್ಗೆ. ವರ್ಷಪೂರಾ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವರಾದರೂ ಮಾಘ ಪೌರ್ಣಿಮೆ ಇಲ್ಲಿ ವಿಶೇಷ ಮಹತ್ವವನ್ನು ಪಡೆದಿದೆ. ಜಾನಪದ ಕತೆಯ ಪ್ರಕಾಋ ಸೀತೆ ಅಗ್ನಿಕುಂಡದಿಂದ ಹೊರಬಂದ ನಂತರ ದೇಹದ ಬಿಸಿಯನ್ನು ಕಳೆದುಕೊಳ್ಳಲು ಈ ಕುಂಡದಲ್ಲಿ ಸ್ನಾನ ಮಾಡಿದ್ದಳಂತೆ. ಈ ಜಾಗದ ಮತ್ತೊಂದು ವಿಶೇಷತೆಯೆಂದರೆ ಈ ಕುಂಡದ ಎದುರೇ ರಾಮಕುಂಡ ಎನ್ನುವ ಸಿಹಿನೀರಿನ ಬುಗ್ಗೆಯಿದೆ. ಈ ಕುಂಡದ ಪಶ್ಚಿಮಕ್ಕೆ ಮೂರು ಲಕ್ಷ್ಮಣ ಕುಂಡ, ಶತ್ರುಘ್ನ ಕುಂಡ ಮತ್ತು ಭರತ ಕುಂಡ ಎನ್ನುವ ರಾಮನ ಸಹೋದರರ ಹೆಸರಿನ ಮೂರು ಜಲಾಶಯಗಳಿವೆ.