ಬಾಂದ್ರಾ - ವರ್ಲಿ ಸಮುದ್ರ ಸಂಪರ್ಕವು ಮುಂಬೈನ ಪ್ರಮುಖ ಹಾಗೂ ನೂತನ ಒಡೆತನ. ಇದು ಮುಂಬೈನ ಗಗನಚುಂಬಿಗಳಿಗೆ ಹೊಸ ಸೇರ್ಪಡೆಯಾಗಿದೆ. ಇದೊಂದು ಎಂಟು ಪಥದ ಸೇತುವೆಯಾದಿದ್ದು ಬಾಂದ್ರಾ ಹಾಗೂ ವರ್ಲಿ ನಡುವೆ ಕೇವಲ ಹತ್ತು ನಿಮಿಷದೊಳಗೆ ಪ್ರಯಾಣ ಮಾಡಬಹುದಾದಂತಹ ಮಾರ್ಗವಾಗಿದೆ. ಈ ಸೇತುವೆಯ ಸಂಕೀರ್ಣ (complex) ನಿರ್ಮಾಣದಿಂದಾಗಿ ಭಾರತದಲ್ಲಿ ಅಷ್ಟೇನು ಜನಪ್ರಿಯತೆಯನ್ನು ಗಳಿಸಿಲ್ಲ. ಈ ಸೇತುವೆಯು ಹೆಚ್ಚು ಸಮಯ ಜನರ ಅನುಪಸ್ಥಿಯನ್ನು ಎದುರಿಸುತ್ತಿದೆ. ಈ ಸೇತುವೆಯಿಂದ ಅರೇಬಿಯನ್ ಸಮುದ್ರದ ನೋಟ/ವೀಕ್ಷಣೆ ಅದ್ಭುತವಾಗಿದ್ದು, ಪ್ರವಾಸಿಗರ ಹೃದಯ ಬಡಿತವನ್ನು ಹೆಚ್ಚು ಮಾಡುತ್ತವೆ! ವಾಹನ ಚಾಲಕರು ಗಮನಿಸಬೇಕಾದುದೇನೆಂದರೆ, ಇದೊಂದು ಟೋಲ್ ಸೇತುವೆಯಾಗಿದ್ದು ಪ್ರಯಾಣ ಮಾಡುವಾಗ ಹೋಗಿ ಹಿಂದಿರುಗುವ ವೆಚ್ಚ ರೂ. 75 ಅನ್ನು ಭರಿಸಬೇಕು.