ಮುಂಬಯಿ ನಗರದ ಇಂತಹ ರುದ್ರ ರಮಣೀಯ ಸೌಂದರ್ಯವನ್ನು ಬೇರೆಲ್ಲೆಡೆಯಿಂದಲೂ ಕಾಣುವುದಿಲ್ಲ. ಪ್ರಭಾದೇವಿ, ಪಾರ್ಟಿ ಪ್ರೀಯರಿಗೆ ಒಂದು ಉತ್ತಮ ತಾಣವನ್ನು ನೀಡುತ್ತದೆ. ತೆರೆದ ತಾರಸಿಯ ಮೇಲೆ ಪಾರ್ಟಿ ಮಾಡುವುದು ಯಾರಿಗೆ ತಾನೇ ಇಷ್ಟವಿಲ್ಲ. ತೆರೆದ ತಾರಸಿ ಎಲ್ಲಿದೆ ಎಂದು ಗೊತ್ತೆ? ಅದೇ ಇಲ್ಲಿನ ಪ್ರಾಮುಖ್ಯತೆ. ಅದಿರುವುದು 34ನೇ ಮಹಡಿಯಲ್ಲಿ. ಇದು ಭಾರತದಲ್ಲೇ ಅತೀ ಎತ್ತರವಾದ ತೆರೆದ ತಾರಸಿಯ ಬಾರ್ ಆಗಿದೆ, ಇದು ಖಂಡಿತ ನೋಡಬೇಕಾದ ಸ್ಥಳ. ಇಲ್ಲಿಗೆ ಹೋಗಿ ಬಂದ ನಂತರ ನೀಡಿದ ಹಣ ಖಂಡಿತ ದಂಡ ಅನ್ನಿಸುವುದಿಲ್ಲ.


Click it and Unblock the Notifications